ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belgavi): ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಸಿದ್ದೇಶ್ವರ ಜಾತ್ರೆಯಲ್ಲಿ ಮನೆಯ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಕುಡುಗೋಲು ಹಾಗೂ ರಾಡ್ ನಿಂದ ದಾಳಿ ಮಾಡಿ ಸಂಗನಗೌಡ ಪಾಟೀಲ(50) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳ ನಡುವೆ ಹಳೆಯ ವೈಷ್ಯಮ್ಯ ಇತ್ತು ಎಂದು ಹೇಳಲಾಗುತ್ತಿದೆ.
ಆರೋಪಿಗಳ ನಡುವೆ ಹಾಗೂ ಸಂಗನಗೌಡ ನಡುವೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ಹೋಗಿ ಕೊಲೆಯ ಹಂತಕ್ಕೆ ಹೋಗಿದೆ. ಭೀಮ್ಮ ಬಳಗನ್ನವರ್, ಮಂಜುನಾಥ ಬಳಗನ್ನವರ್, ಸಿದ್ದಪ್ಪ, ಬಸವಂತಪ್ಪ, ನಾಗರಾಜ, ರುದ್ರಪ್ಪ, ಸೂರಪ್ಪ, ವಿಜಯ್ ಬಂಧಿತ ಆರೋಪಿಗಳು. ಈ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




