ಪ್ರಜಾಸ್ತ್ರ ಸುದ್ದಿ
ಲಖನೌ(Lucknow): ಉತ್ತರ ಪ್ರದೇಶದ ಚರಖಾರಿ ವಿಧಾನಸಭಾ ಕ್ಷೇತ್ರದ ಶಾಸಕ ಬ್ರಿಜ್ ಭೂಷಣ್ ರಜಪೂತ್ ಬಳಿ ವ್ಯಕ್ತಿಯೊಬ್ಬ ನನಗೆ ಮದುವೆ ಮಾಡಿಸಿ ಎಂದು ವಿಚಿತ್ರವಾದ ಮನವಿ ಮಾಡಿದ್ದಾನೆ. ಇದನ್ನು ಶಾಸಕರು ಸ್ವತಃ ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಮಹೋಬಾದ್ ಪೆಟ್ರೋಲ್ ಬಂಕ್ ವೊಂದಕ್ಕೆ ಹೋಗಿದ್ದಾರೆ. ಅಲ್ಲಿನ ಉದ್ಯೋಗಿ ಖಲಿಲೇಂದ್ರ ಖರೆ, ನನಗೆ 44 ವರ್ಷವಾಗಿದೆ. ಇನ್ನೂ ಮದುವೆಯಾಗಿಲ್ಲ. ನಿಮಗೆ ಮತ ಹಾಕಿದ್ದೇನೆ. ನನಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾನೆ. ಆಗ ಶಾಸಕರು ಇದಕ್ಕೂ ಮೊದಲು ಯಾರ ಹತ್ತಿರವಾದರ ಕೇಳಿದ್ದೀಯಾ ಎಂದಿದ್ದಾರೆ. ಮಹೋಬಾದ್ ಶಾಸಕ ರಾಕೇಶ್ ಕುಮಾರ್ ಗೋಸ್ವಾಮಿ ಅವರ ಹತ್ತಿರ ಕೇಳಿದ್ದೆ. ಪ್ರಯೋಜನವಾಗಿಲ್ಲ ಎಂದಿದ್ದಾನೆ.
ನಿನಗೆ ಯಾವ ತರ ಹುಡುಗಿ ಬೇಕು ಎಂದು ಕೇಳಿದಾಗ, ನನಗೆ ಇಂತಹದೆ ಸಮುದಾಯದ ಹುಡುಗಿ ಬೇಕು ಅನ್ನೋದು ಏನೂ ಇಲ್ಲ ಎಂದಿದ್ದಾನೆ. ಆಯ್ತು ನಿಮಗೆ ಹುಡುಗಿ ಹುಡುಕಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.