ಪ್ರಜಾಸ್ತ್ರ ಸುದ್ದಿ
ವಾಷಿಂಗ್ಟನ್(Washington DC): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವೈಖರಿ ವಿರುದ್ಧ ಅಲ್ಲಿನ ಜನರು ತಿರುಗಿ ಬಿದ್ದಿದ್ದಾರೆ. ಸರ್ಕಾರದ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕಡಿತಗೊಳಿಸಿರುವುದು, ವ್ಯಾಪಾರದ ಮೇಲಿನ ಸುಂಕ ಸೇರಿದಂತೆ ಹಲವು ಜನ ವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಅಧ್ಯಕ್ಷರ ವಿರುದ್ಧ ಸಾವಿರಾರು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಾಸ್ ಏಂಜಲೀಸ್, ಹೊಸ್ಟನ್, ವಾಷಿಂಗ್ಟನ್, ನ್ಯೂಕಾರ್ಯ್, ಫ್ಲೋರಿಡಾ ಸೇರಿದಂತೆ ಹಲವು ನಗರಗಳಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹಲವು ನಾಯಕರು, ವಿವಿಧ ಕ್ಷೇತ್ರಗಳ ಖ್ಯಾತನಾಮರು ಟ್ರಂಪ್ ನೀತಿಗಳ ವಿರುದ್ಧ ತಮ್ಮ ಆಕ್ರೋಶ ಭರಿತ ಭಾಷಣದಿಂದ ಕಿಡಿ ಕಾರುತ್ತಿದ್ದಾರೆ. ಆಕ್ರಮಣಕಾರಿ ನೀತಿಗಳಿಂದ ದೇಶ ನಾಶವಾಗುತ್ತದೆ. ಇದು ಆರ್ಥಿಕ ಹುಚ್ಚುತನ. ಜಾಗತಿಕವಾಗಿ ದೇಶವನ್ನು ಹಿಂದಕ್ಕೆ ತಳ್ಳಿದ್ದಾರೆ. ಇದರೊಂದಿಗೆ ಸಾಂವಿಧಾನಿ ಬಿಕ್ಕಟ್ಟು ಎದುರಾಗಿದೆ ಅಂತಾ ಅಸಮಾಧಾನ ಹೊರ ಹಾಕಲಾಗುತ್ತಿದೆ.