ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ಕಳೆದ ಸುಮಾರು 9 ವರ್ಷಗಳಿಂದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹಿರೇಗುಂಟನೂರು ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ವಿಡಿಯೋ ಮುಂದಿಟ್ಟುಕೊಂಡು ಬೆದರಿಕೆ ಹಾಕಿದ್ದಾಳೆ. ಇದರಿಂದ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಂಜುನಾಥ್ ಮಹಿಳೆಯೊಬ್ಬಳ ಜೊತೆಗೆ 9 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ವೇಳೆ ಆಕೆಗೆ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಕೊಟ್ಟಿದ್ದಾನೆ. ಮೂರು ಮೊಬೈಲ್ ಹೊಂದಿದ್ದ ಮಹಿಳೆಯ ಫೋನ್ ನನ್ನು ಮಂಜುನಾಥ್ ಚೆಕ್ ಮಾಡಿದ್ದಾನೆ. ಆಗ ಅನೇಕ ಪುರುಷರ ನಂಬರ್ ಗಳು ಸಿಕ್ಕಿವೆ. ಇದನ್ನು ಪ್ರಶ್ನಿಸಿದ್ದಾನೆ. ತಾನು ಕೊಟ್ಟ ಹಣವನ್ನು ಕೇಳಿದ್ದಾನೆ. ಆಗ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾಳೆ. ಈ ಹಿಂದೆ ತಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲವೆಂದು ಬರೆಸಿಕೊಂಡಿದ್ದಳಂತೆ. ಈಗ ನೋಡಿದರೆ ಉಲ್ಟಾ ಆಗಿದೆ. ಇವನು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.