ಪ್ರಜಾಸ್ತ್ರ ಸುದ್ದಿ
ಲಾಸ್ ಏಂಜಲೀಸ್: ಸ್ಪೈಡರ್ ಮ್ಯಾನ್ ಸರಣಿ ಚಿತ್ರಗಳ ಖ್ಯಾತ ಜೋಡಿ ಮದುವೆಗೆ ಸಜ್ಜಾಗುತ್ತಿದೆ. ನಟ ಟಾಮ್ ಹೊಲ್ಯಾಂಡ್ ಹಾಗೂ ನಟಿ ಜಂಡಿಯಾ(Tom Holland and Zendaya) ಜೋಡಿ ಡೇಟಿಂಗ್ ನಲ್ಲಿತ್ತು. ಆದರೆ, ಬಹಿರಂಗ ಪಡಿಸಿರಲಿಲ್ಲ. ಇತ್ತೀಚೆಗೆ ಲಾಸ್ ಏಂಜಲೀಸ್ ನಲ್ಲಿ ನಡೆದ ಗೋಲ್ಡನ್ ಗ್ಲೋಬ್ ಕಾರ್ಯಕ್ರಮದಲ್ಲಿ ಉಂಗುರು ಬದಲಿಸಿಕೊಂಡಿದೆ. ಇಬ್ಬರಿಗೂ 28 ವರ್ಷವಿದ್ದು ಶೀಘ್ರದಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ.
2017ರಲ್ಲಿ ಬಂದ ಸ್ಪೈಡರ್ ಮ್ಯಾನ್ ಹೋಂ ಕಮಿಂಗ್(Spider Man Home Coming) ಸಾಕಷ್ಟು ಯಶಸ್ಸು ಗಳಿಸಿತು. 2019ರಲ್ಲಿ ಸ್ಪೈಡರ್ ಮ್ಯಾನ್: ಫಾರ್ ಫ್ರಮ್ ಹೋಂ, 2021ರಲ್ಲಿ ಸ್ಪೈಡರ್ ಮ್ಯಾನ್ ನೋ ವೇ ಹೋಂ ಎನ್ನುವ ಸರಣಿ ಚಿತ್ರಗಳನ್ನು ಮಾಡಿತು. ಇದರಲ್ಲಿ ನಟ ಟಾಮ್ ಹಾಗೂ ನಟಿ ಜಂಡಿಯಾ ಒಟ್ಟಿಗೆ ನಟಿಸಿದರು. ಗಾಯಕಿಯಾಗಿರುವ ಜಂಡಿಯಾ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.