Ad imageAd image

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ

Nagesh Talawar
ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ(National Center for Seismology) ಕೇಂದ್ರ ತಿಳಿಸಿದೆ. ಸುಮಾರು 5 ಕಿಲೋ ಮೀಟರ್ ವರೆಗೆ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ. ಇದರಿಂದಾಗಿ ಜನರು ಸಾಕಷ್ಟು ಭಯಭೂತರಾಗಿದ್ದರು. ಅದೃಷ್ಟವಶಾತ್ ಯಾವುದೇ ಜೀವಹಾನಿ ದಾಖಲಾಗಿಲ್ಲ.

ದೆಹಲಿ, ಎನ್ ಸಿಆರ್, ನೊಯ್ಡಾ, ಇಂದಿರಾಪುರಂನಲ್ಲಿ ಸೋಮವಾರ ನಸುಕಿನಜಾವ 5.30ರ ಸುಮಾರಿಗೆ ಭೂಕಂಪ(Earthquake) ಸಂಭವಿಸಿದೆ. ಈ ಬಗ್ಗೆ ಎನ್ ಸಿಎಸ್ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಈ ವೇಳೆ ಭಯಗೊಂಡು ಜನರು ಎನ್ ಸಿಎಸ್ ಸಹಾಯವಾಣಿ ಕೇಂದ್ರಕ್ಕೂ ಫೋನ್ ಮಾಡಿರುವುದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article