ಪ್ರಜಾಸ್ತ್ರ ಸುದ್ದಿ
ಉತ್ತರ ಕನ್ನಡ(Uttara Kannada): ಖಾಸಗಿ ಬಸ್ಸೊಂದು ಹಳ್ಳಕ್ಕೆ ಬಿದ್ದು 18ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಮವಾರ ಮುಂಜಾನೆ ಅಂಕೋಲಾ ತಾಲೂಕಿನ ಅಗಸೂರು ಹತ್ತಿರದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿಬಿದ್ದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಮಾರ್ಗವಾಗಿ ಮಂಗಳೂರಿಗೆ ಬಸ್ ತೆರಳುತ್ತಿತ್ತು. ಅಂಕೋಲಾ ತಾಲೂಕಿನ ಅಗಸೂರು ಹತ್ತಿರ ಬರುತ್ತಿದ್ದರಂತೆ ಚಾಲಕನ ನಿಯಂತ್ರಣ ತಪ್ಪಿದಿ. ಬಸ್ಸಿನಲ್ಲಿ 25 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಆಗಿಲ್ಲ.