ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಖಾಸಗಿ ಶಾಲೆಯ ಬಸ್ ವೊಂದು ಅಪಘಾತವಾಗಿದೆ. ಅದೃಷ್ಟವಶಾತ್ ಅನಾಹುತವೊಂದು ತಪ್ಪಿದೆ. ಮಾದನಾಯಕನಹಳ್ಳಿ ನಡೆದಿದೆ. ನ್ಯೂ ಆಕ್ಸ್ ಫರ್ಡ್ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಅಪಘಾತವಾಗಿದೆ. ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಮುಂಭಾಗದ ಸಂಪೂರ್ಣ ನಜ್ಜಗುಜ್ಜಾಗಿದೆ.
ಬಸ್ ಅತಿ ವೇಗವಾಗಿ ಚಲಾಯಿಸಿದ್ದಕ್ಕೆ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಮೊದಲು ಐಷಾರಾಮಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಹೋಟೆಲ್ ವೊಂದಕ್ಕೆ ಗುದ್ದಿದೆ. ಅದೃಷ್ಟಕ್ಕೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಾವುದೇ ಅನಾಹುತವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.