ಪ್ರಜಾಸ್ತ್ರ ಸುದ್ದಿ
ಜಮ್ ಶೇಡಪುರ(jamshedpur): ಕುತ್ತಿಗೆಗೆ ಹಾವು ಸುತ್ತಿಕೊಂಡು ಪ್ರದರ್ಶನ ನೀಡುವ ಮೂಲಕ ಜೀವನ ನಡೆಸುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬ ಅದೇ ಹಾವಿನಿಂದ ಮೃತಪಟ್ಟಿದ್ದಾನೆ. ಜಾರ್ಖಂಡನ ಜಮ್ ಶೇಡಪುರದಲ್ಲಿ ಗುರುವಾರ ನಡೆದಿದೆ. ಹೇಮಂತ್ ಸಿಂಗ್ ಎನ್ನುವ ವ್ಯಕ್ತಿ ಕುತ್ತಿಗೆಗೆ ಹೆಬ್ಬಾವು(python) ಸುತ್ತಿಕೊಂಡು ಪ್ರದರ್ಶನ ನೀಡುತ್ತಿದ್ದ, ಏಕಾಏಕಿ ಹಾವು ಕುತ್ತಿಗೆಗೆ ಬಿಗಿದುಕೊಂಡಿದೆ. ಇದರಿಂದಾಗಿ ಉಸಿರುಗಟ್ಟಿ(suffocation) ಮೃತಪಟ್ಟಿದ್ದಾನೆ. ನಂತರ ಹಾವು ಕುತ್ತಿಗೆಯನ್ನು ಸಡಿಲಿಕೆ ಮಾಡಿದೆ.
ಹಾವು ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದ್ದ ವೇಳೆ ಯಾರೂ ರಕ್ಷಣೆಗೆ ಬರದೆ ಹೋಗಿದ್ದಾರೆ. ಹೆಬ್ಬಾವಿನ ಭಯದಿಂದಲೊ ಏನೋ ಬಹುಶಃ ರಕ್ಷಣೆ ಸಿಗದೆ ವ್ಯಕ್ತಿ ಮೃತಪಟ್ಟಿದ್ದಾನೆ. ಮಂಗೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಅರಣ್ಯ ಇಲಾಖೆಯವರು ಹೆಬ್ಬಾವನ್ನು ವಶಕ್ಕೆ ಪಡೆದು ಕಾಡಿಗೆ ಬಿಟ್ಟಿದ್ದಾರೆ.