ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ತೋಟದ ಮನೆಯಲ್ಲಿ ಮಹಿಳೆಯೊಂದಿಗೆ ವಾಸವಾಗಿದ್ದ ರೌಡಿ ಶೀಟರ್ ವೊಬ್ಬನ ಕೊಲೆ(Murder) ಮಾಡಿದ ಘಟನೆ ಜಿಲ್ಲೆಯ ಜಯಪುರ ಹೋಬಳಿಯ ಅನಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೌಡಿ ಶೀಟರ್ ದೊರೆಸ್ವಾಮಿ(30) ಕೊಲೆಯಾದವನೆಂದು ತಿಳಿದು ಬಂದಿದೆ. ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಗೋಪಾಲಪುರ ಗ್ರಾಮದ ಪುಷ್ಪಾ ಎಂಬುವರ ಮಗನಾದ ಈತ ಬೆಂಗಳೂರು ಮೂಲದ ಮಹಿಳೆಯೊಂದಿಗೆ ಅನಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ. ಗುರುವಾರ ಮಧ್ಯಾಹ್ನ ವ್ಯಕ್ತಿಯ ಕೊಲೆಯಾಗಿದೆ ಎಂದು ತಿಳಿದು ಬಂದಿದೆ. ಇತನೊಂದಿಗಿದ್ದ ಮಹಿಳೆ ನಾಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಎಸ್ಪಿ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ.