ಪ್ರಜಾಸ್ತ್ರ ಸುದ್ದಿ
ದುಬೈ(Dubai): ಇಲ್ಲಿನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಟಿ-20 ವಿಶ್ವಕಪ್(Women T2o World Cup 2024) ಟೂರ್ನಿಯ ಮೊದಲ ಪಂದ್ಯ ಶನಿವಾರ ನಡೆದಿದೆ. ಭಾರತ ಹಾಗೂ ನ್ಯೂಜಿಲೆಂಡ್(IND vs NZ) ತಂಡಗಳು ಮುಖಾಮುಖಿಯಾಗಿವೆ. ಹರ್ಮನ್ ಪ್ರೀತ್ ಕೌರ್ ಬಳಗ ಮೊದಲ ಪಂದ್ಯವೇ ಸೋತು ನಿರಾಸೆಯೊಂದಿಗೆ ಟೂರ್ನಿಯನ್ನು ಪ್ರಾರಂಭಿವಿಸಿದೆ. ನ್ಯೂಜಿಲೆಂಡ್ ನೀಡಿದ್ದ 161 ರನ್ ಗಳ ಗುರಿ ಬೆನ್ನುಹತ್ತಿದ ಭಾರತ ತಂಡ 19 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಗಿ ಸೋಲು ಕಂಡಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೀವಿಸ್ ನಾಯಕಿ ಶೋಫಿ ಡೆವಿನ್ 57 ರನ್ ಗಳ ಕಾಣಿಕೆ ನೀಡಿದರು. ಜಾರ್ಜಿಯಾ ಪಿಲಿಮಿರ್ 34, ಸುಝೆ ಬಟ್ಸ್ 27 ರನ್ ಗಳಿಂದಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಭಾರತ ಪರ ರೇಣುಕಾ ಸಿಂಗ್ 2, ಅರುಂಧತಿ ರೆಡ್ಡಿ, ಆಶಾ ಸೊಭನ್ ತಲಾ 1 ವಿಕೆಟ್ ಪಡೆದರು. ಈ ಸ್ಕೋರ್ ಚೇಸ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲಿಯೇ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು.
ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನಾ 12, ಶಫಾಲಿ ವರ್ಮಾ 2, ನಾಯಕಿ ಕೌರ್ 15, ಜೆಮಿಯಾ ರೊಡ್ರಿಗಸ್ 13, ರಿಚಾ ಘೋಸ್ 12, ದೀಪ್ತಿ ಶರ್ಮಾ 13, ಅರುಂಧತಿ ರೆಡ್ಡಿ 1, ಪೂಜಾ ವಸ್ತ್ರಾಕರ್ 8, ಶ್ರೇಯಾಂಕಾ ಪಾಟೀಲ 7, ರೇಣುಕಾ ಸಿಂಗ್ 0 ರನ್ ಗಳಿಸಿ ಔಟ್ ಆದರು. ಒಂದೇ ಒಂದು ಜೋಡಿಯಿಂದ ಬಿಗ್ ಆಟ ಬರಲಿಲ್ಲ. ಹೀಗಾಗಿ 58 ರನ್ ಗಳ ಅಂತರದಿಂದ ಸೋಲು ಅನುಭವಿಸಿತು.




