ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಅಯೋಧ್ಯೆಯಲ್ಲಿರುವ(Ayodhya) ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರ ರಾಮ ಮಂದಿರ(Ram Mandir) ಸ್ಫೋಟಿಸುವುದಾಗಿ ಸಿಖ್ ಪ್ರತ್ಯೇಕತವಾದಿ (Khalistan) ಗುರ್ಪತ್ ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ನವೆಂಬರ್ 16 ಹಾಗೂ 17ರಂದು ರಾಮ ಮಂದಿರದಲ್ಲಿ ಹಿಂಸಾಚಾರ ನಡೆಯಲಿದೆ ಎಂದಿದ್ದಾನೆ.
ಕೆನಡಾದ ಬ್ರಾಂಪ್ಟನ್ ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇತನ ವಿಡಿಯೋದಲ್ಲಿ ಪ್ರಧಾನಿ ಮೋದಿ ರಾಮ ಮಂದಿರದಲ್ಲಿ ಪೂಜೆ ಮಾಡುತ್ತಿರುವ ಫೋಟೋ ಸಹ ಬಳಸಿಕೊಳ್ಳಲಾಗಿದೆ. ಭಾರತದಿಂದ ತಲೆಮರೆಸಿಕೊಂಡಿರುವ ಪನ್ನು(Gurpatwant Singh pannun) ಆಗಾಗ ಈ ರೀತಿಯ ಬೆದರಿಕೆಗಳನ್ನು ಹಾಕುತ್ತಿರುತ್ತಾನೆ. ಸಿಖ್ ಗಲಭೆ ನಡೆದು 40 ವರ್ಷಗಳು ತುಂಬಿವೆ. ನವೆಂಬರ್ 1ರಿಂದ 19ರ ತನಕ ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಬೇಡಿ ಎಂದು ಸಹ ಎಚ್ಚರಿಕೆ ನೀಡಿದ್ದಾನೆ.