ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಂಟಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಈ ಸಂಬಂಧ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಬೆಳಗಾವಿ ಮೂಲದ ಮಹಿಳೆ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮದೇವಿ ಜಾತ್ರೆಗೆ ತನ್ನೆರಡು ಸಣ್ಣ ಮಕ್ಕಳೊಂದಿಗೆ ಬಂದಿದ್ದರು. ವಾಪಸ್ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು. ಸುಮಾರು 10 ಪ್ರಯಾಣಿಕರು ಇರುವ ಖಾಸಗಿ ಬಸ್ ಬಂದಿದೆ. ಅದರಲ್ಲಿ ಮಹಿಳೆ ಹತ್ತಿದ್ದಾಳೆ.
ಇತರೆ ಪ್ರಯಾಣಿಕರು ಇಳಿದು ಹೋಗಿದ್ದಾರೆ. ಚಿಕ್ಕಮಕ್ಕಳೊಂದಿಗೆ ಮಹಿಳೆ ಒಬ್ಬರೆ ಉಳಿದಿದ್ದಾರೆ. ಆಗ ಬಸ್ ಅನ್ನು ದಾವಣಗೆರೆ ಕಡೆ ತಿರುಗಿಸಿ ಚಿನ್ನಾಪುರಕ್ಕೆ ಕರೆದುಕೊಂಡು ಹೋಗಿ ಮೂವರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಸ್ ಚಾಲಕ ಕೂಟ್ಟೂರು ಮೂಲದ ಪ್ರಕಾಶ ಮಡಿವಾಳ, ಕಂಡಕ್ಟರ್ ಹರಪ್ಪನಹಳ್ಳಿ ಮೂಲದ ರಾಜಶೇಖರ ಹಾಗೂ ಬಸ್ ಏಜೆಂಟ್ ಸುರೇಶ ಅನ್ನೋ ಮೂವರ ಮೇಲೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.