ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶದ ತುಂಬಾ ಜಾತಿ ಗಣತಿ ನಡೆಸಬೇಕು ಎನ್ನುವ ಬೇಡಿಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಕಾಂಗ್ರೆಸ್(Congress) ನೇತೃತ್ವದ ಇಂಡಿಯಾ ಬಣ ಬೆಂಬಲ ನೀಡಿದೆ. ಜಾತಿ(caste census)ಗಣತಿ ನಡೆಸಲು ಒತ್ತಾಯಿಸಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ ಸಹ ಇದಕ್ಕೆ ದನಿಗೂಡಿಸಿದೆ. ಈಗ ಬಿಹಾರದ ಜೆಡಿಯು ಸಹ ಜಾತಿಗಣತಿ ಪರವಾಗಿದ್ದು, ಇಂಡಿಯಾ ಬಣದ ಪರ ಒಲವು ತೋರಿಸಿದೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ನೇತೃತ್ವದ ಎನ್ ಡಿಎ ಬಣದಲ್ಲಿ ಅಸಮಾಧಾನ ಮೂಡಿಸಿದೆ.
ಈ ಬಗ್ಗೆ ಜೆಡಿಯು ಗುರುವಾರ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಒಬಿಸಿಗಳ ಕಲ್ಯಾಣಕ್ಕಾಗಿ ಸಂಸದೀಯ ಸಮಿತಿಯನ್ನು ಜೆಡಿಯು ಸೇರಿದೆ. ಡಿಎಂಕೆ ಸದಸ್ಯ ಟಿ.ಆರ್ ಬಾಲು, ಬಿಜೆಪಿ ಸದಸ್ಯ ಗಣೇಶ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಜಾತಿಗಣಿತಿ ವಿಚಾರವನ್ನು ಮೊದಲ ಅಜೆಂಡಾದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಟಿಎಂಸಿಯ(TMC) ಸದಸ್ಯ ಕಲ್ಯಾಣ ಬ್ಯಾನರ್ಜಿ, ಜೆಡಿಯು(JDU) ಸದಸ್ಯ ಗಿರ್ಧಾರಿ ಯಾದವ್ ಬೆಂಬಲ ಸೂಚಿಸಿದರು. ಇದರಿಂದಾಗಿ ಎನ್ ಡಿಎದೊಳಗೆ ಒಂದಿಷ್ಟು ಚರ್ಚೆಗೆ ಕಾರಣವಾಗಿದೆ. ಬಿಹಾರ ಸಿಎಂ ನಿತಿಶ್ ಕುಮಾರ್ ಅವರು ಎನ್ ಡಿಎಗೆ(NDA) ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.