Ad imageAd image

ಕೆಲಸ ಮಾಡ್ತಿದ್ದ ಕಂಪನಿಯಿಂದಲೇ 50 ಲ್ಯಾಪ್ ಟಾಪ್ ಕದ್ದ ಟೆಕ್ಕಿ

ನಗರದ ವೈಟ್ ಫೀಲ್ಡ್ ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬರೋಬ್ಬರಿ 50ಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

Nagesh Talawar
ಕೆಲಸ ಮಾಡ್ತಿದ್ದ ಕಂಪನಿಯಿಂದಲೇ 50 ಲ್ಯಾಪ್ ಟಾಪ್ ಕದ್ದ ಟೆಕ್ಕಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಗರದ ವೈಟ್ ಫೀಲ್ಡ್ ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬರೋಬ್ಬರಿ 50ಕ್ಕೂ ಹೆಚ್ಚು ಲ್ಯಾಪ್ ಟಾಪ್(laptops) ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಊರಲ್ಲಿರುವ ಜಮೀನಿನಲ್ಲಿ ಹಾಕಿಟ ಟೊಮೆಟೊ ಬೆಳೆ ಕೈಕೊಟ್ಟಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ಹೊಸೂರಿನ ಎಂ.ಮುರುಗೇಶ್ ಸಾಲು ತೀರಿಸಲು ಲಾಪ್ ಟಾಪ್ ಕಳ್ಳತನಕ್ಕೆ ಇಳಿದಿದ್ದ.

ಆಗಸ್ಟ್ ತಿಂಗಳ ಕೊನೆಯಲ್ಲಿ ಕೆಲಸ ಬಿಟ್ಟಿದ್ದ. ಕಂಪನಿಯು ಲೆಕ್ಕಪರಿಶೋಧನೆ ನಡೆಸಿದಾಗ ಲ್ಯಾಪ್ ಟಾಪ್ ಕಾಣೆಯಾಗಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಮುರುಗೇಶ್ ಫೆಬ್ರವರಿ ತಿಂಗಳಿನಿಂದ ಲ್ಯಾಪ್ ಟಾಪ್ ಕಳ್ಳತನ(Theft) ಮಾಡುತ್ತಿರುವುದು ತಿಳಿದಿದೆ. ಪೊಲೀಸರಿಗೆ ದೂರು ನೀಡಲಾಗಿದೆ. ಅವನ ಊರಿಗೆ ತೆರಳಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾನು ಲಾಪ್ ಟಾಪ್ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ.

ಬಂಧನದ ಬಳಿಕ 5 ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ. ತಾನು 45 ಲ್ಯಾಪ್ ಟಾಪ್ ಕದ್ದಿರುವುದಾಗಿ ಹೇಳ್ತಿದ್ದಾನೆ. 22 ಲಕ್ಷ ರೂಪಾಯಿ ಮೌಲ್ಯದ 50 ಲ್ಯಾಪ್ ಟಾಪ್ ಕದ್ದಿರುವ ಆರೋಪ ಇವನ ಮೇಲಿದೆ. ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿರುವ ಪೊಲೀಸರು ಕೋರ್ಟ್ ಎದುರು ಹಾಜರು ಪಡಿಸಿದರು. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

WhatsApp Group Join Now
Telegram Group Join Now
TAGGED:
Share This Article