ಪ್ರಜಾಸ್ತ್ರ ಸುದ್ದಿ
ಜೈಪುರ(Jaipura): ಭಾರತ ಹಾಗೂ ಪಾಕ್ ನಡುವಿನ ಸಂಘರ್ಷ ಒಂದಿಷ್ಟು ಶಾಂತವಾದ ಬಳಿಕ ಐಪಿಎಲ್-2025ನ ಉಳಿದ ಪಂದ್ಯಗಳು ಮರು ಪ್ರಾರಂಭವಾಗಿದ್ದು, ಭಾನುವಾರ ನಡೆದ 2ನೇ ಪಂದ್ಯದಲ್ಲಿ ರಾಜಸ್ತಾನ ವಿರುದ್ಧ ಪಂಜಾಬ್ ತಂಡ 10 ರನ್ ಗಳ ರೋಚಕ ಗೆಲುವು ದಾಖಲಿಸಿದೆ. ಇಲ್ಲಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ 2019 ನರ್ ಗಳಿಸಿತ್ತು. ರಾಜಸ್ತಾನ 209 ರನ್ ಗಳಿಸಿ ಕೇವಲ 10 ರನ್ ಗಳಿಂದ ಸೋಲು ಕಂಡಿತು.
ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟ್ ಮಾಡಿತು. ನೇಹಲ್ ವಡೇರಾ 70, ಶಶಾಂಕ್ ಸಿಂಗ್ 59, ನಾಯಕ ಶ್ರೇಯಸ್ ಅಯ್ಯರ್ 30 ರನ್ ಗಳಿಂದಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ದೊಡ್ಡ ಸವಾಲು ನೀಡಿತು. ರಾಜಸ್ತಾನ ಪರ ತುಷಾರ್ ದೇಶಪಾಂಡೆ 2, ಕ್ವೇನ್ ಮಪಶ್ಕಾ, ರಿಯಾನ್ ಪರಾಗ್, ಆಕಾಶ್ ಪದ್ವಾಲ್ ತಲಾ 1 ವಿಕೆಟ್ ಪಡೆದರು.
ರಾಜಸ್ತಾನ ಕೊನೆಯವರೆಗೂ ಹೋರಾಟ ನಡೆಸಿದರೂ ಅಂತಿಮವಾಗಿ ಸೋಲು ಕಂಡಿತು. ಯಶಸ್ವಿ ಜೈಸ್ವಾಲ್ 50, ವೈಭವ್ ಸೂರ್ಯವಂಶಿ 40, ಧ್ರುವ್ ಜುರ್ಲ್ 53 ರನ್ ಗಳಿಂದಾಗಿ 200 ರನ್ ಗಳ ಗಡಿ ದಾಟಿತು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ 10 ರನ್ ಗಳಿಂದ ಸೋಲು ಕಂಡಿತು. ಪಂಜಾಬ್ ಪರ ಇಂಪ್ಯಾಕ್ ಪ್ಲೇಯರ್ ಹರ್ ಪ್ರೀತ್ ಬರಾರ್ 3 ವಿಕೆಟ್ ಪಡೆದು ಮಿಂಚಿದರು. ಮಾರ್ಕ್ ಜಾನ್ಸನ್, ಅಜ್ಮುತುಲ್ಲಾ ಓಮರ್ ಝಿ ತಲಾ 2 ವಿಕೆಟ್ ಪಡೆದರು.