ಪ್ರಜಾಸ್ತ್ರ ಸುದ್ದಿ
ಕೆ.ಆರ್ ಪೇಟೆ(K.R.Pte): ವಿದ್ಯುತ್ ತಂತಿ ತಾಗಿ ಹುಲ್ಲು ತುಂಬಿದ ಟ್ರ್ಯಾಕ್ಟರ್ ಗೆ ಬೆಂಕಿ ಹತ್ತಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಟ್ರ್ಯಾಕ್ಟರ್ ಗೂ ಸಾಕಷ್ಟು ಹಾನಿಯಾಗಿದೆ.
ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಅಷ್ಟರಲ್ಲಿ ಆಗಲೇ ಬೆಂಕಿ ಸಾಕಷ್ಟು ಹಾನಿ ಮಾಡಿತ್ತು. ವಿದ್ಯುತ್ ತಂತಿಗಳು ಸಾಕಷ್ಟು ಕೆಳಗೆ ಇದ್ದು, ಕೆಇಬಿ ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಸಾರಿ ಹೇಳಿದರೂ ಸರಿ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




