ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕೆಲಸ ಶುಕ್ರವಾರ ಮಾಡಲಾಗುತ್ತಿತ್ತು. ಕ್ರೇನ್ ಮೂಲಕ ಕಳಸ ಇಡುವ ಕೆಲಸ ನಡೆದಿದೆ. ಈ ವೇಳೆ ಕ್ರೇನ್ ಬಕೆಟ್ ಬಿದ್ದಿದೆ. ಈ ವೇಳೆ ಕಾರ್ಮಿಕರು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.
ಅದೆ ಗ್ರಾಮದ ಮಂಜುನಾಥ ಪಾಟೀಲ(48) ಮೃತ ವ್ಯಕ್ತಿಯಾಗಿದ್ದಾನೆ. ಮಂಜು ಬಡಿಗೇರ(45) ಎಂಬಾತ ಗಾಯಗೊಂಡಿದ್ದಾನೆ. ಇಬ್ಬರನ್ನು ಹಾನಗಲ್ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತಲೆಗೆ ಗಂಭೀರ ಗಾಯವಾಗಿದ್ದ ಮಂಜುನಾಥ ಪಾಟೀಲ ಮೃತಪಟ್ಟಿದ್ದಾನೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.