ಪ್ರಜಾಸ್ತ್ರ ಸುದ್ದಿ
ಕೂಡ್ಲಗಿ(Kudlgi): ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮುಂಜಾನೆ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ ಸಾಗರ ಡಾಬಾ ಹತ್ತಿರ ನಡೆದಿದೆ. ಚಾಲಕ, ನಿರ್ವಾಹಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಬಸ್ ಚಾಲಕ ಶಶಿಧರ ಎಂಬುವರ ಬಲಗಾಲು ಮುರಿದಿದೆ. ನಿರ್ವಹಾಕ ಅಲಿ ಪಟೇಲ್ ಎಂಬುವರ ಮುಖಕ್ಕೆ ಗಾಯವಾಗಿದೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಸೇರಿ ಬಸ್ಸಿನಲ್ಲಿ 62 ಜನರಿದ್ದರು. ಕೂಡ್ಲಗಿ ಘಟಕ್ಕೆ ಸೇರಿದ ಬಸ್ ಕಸಾಪುರಕ್ಕೆ ಹೋಗಿ ವಾಪಸ್ ಬರುವಾಗ ಅಪಘಾತವಾಗಿದೆ.




