ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಬೆಕ್ಕು ಕಚ್ಚಿದರೆ, ಪರಚಿದರೆ ಸಹಜವಾಗಿ ಏನೂ ಆಗಲ್ಲ ಬಿಡು ಎನ್ನುವ ದೋರಣೆಯೇ ಎಲ್ಲರದ್ದು. ಹೀಗಾಗಿ ಅನೇಕ ಅನಾಹುತಗಳು ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸಾಕಿದ ಬೆಕ್ಕು(Cat) ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರ(Shikaripura) ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ. ಗಂಗಿಬಾಯಿ(50) ಮೃತ ದುರ್ದೈವಿ ಮಹಿಳೆ.
ಕೆಲವು ದಿನಗಳ ಹಿಂದೆ ಗಂಗೀಬಾಯಿ ಅವರಿಗೆ ಸಾಕಿದ ಬೆಕ್ಕು ಕಾಲಿಗೆ ಕಚ್ಚಿದೆ. ಇದಕ್ಕೆ ಅವರು ಐದು ಇಂಜೆಕ್ಷನ್ ಪಡೆಯಬೇಕಿತ್ತು. ಆದರೆ, ಒಂದು ಇಂಜೆಕ್ಷನ್ ಪಡೆದು ನಂತರ ಆಸ್ಪತ್ರೆಗೆ ಹೋಗಿಲ್ಲ. ಇದರ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ರೇಬೀಸ್ ನಂಜು ತಗುಲಿರುವುದು ತಿಳಿದಿದೆ. ಇದು ಏರುತ್ತಲೇ ಹೋಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಹಿಳೆ(Women) ಮಾಡಿಕೊಂಡ ಯಡವಟ್ಟಿನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಮಹಿಳೆಗೆ ಕಚ್ಚಿದ ಬೆಕ್ಕಿಗೆ ಈ ಮೊದಲು ನಾಯಿ ಕಚ್ಚಿದೆಯಂತೆ. ಅದರಿಂದ ಬೆಕ್ಕಿಗೆ ರೇಬೀಸ್(Rabies) ನಂಜು ತಗುಲಿದೆ. ನಂತರ ಬೆಕ್ಕು ಮನೆಯ ಯಜಮಾನತಿಗೆ ಕಚ್ಚಿದ್ದರಿಂದ ಅವರಿಗೆ ರೇಬೀಸ್ ನಂಜು ತಗುಲಿದೆ ಎನ್ನುವುದು ವೈದ್ಯರ ಮಾತು. ಒಂದು ಇಂಜೆಕ್ಷನ್ ಪಡೆದು ಉಳಿದ ನಾಲ್ಕು ಇಂಜೆಕ್ಷನ್ ಪಡೆಯದೆ ನಿರ್ಲಕ್ಷ್ಯ ಮಾಡಿದ್ದೆ ಮುಳುವಾಗಿದೆ.