ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಸಿಂದಗಿ(Sindagi): ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಜುಲೈ 20, ಶನಿವಾರ ಸಂಜೆ ಪಟ್ಟಣದ ತಾಲೂಕು ಸಾಹಿತ್ಯ ಪರಿಷತ್ ಸಭಾಭವನದಲ್ಲಿ ‘ಮುಂಗಾರು ಮಳೆಯೊಂದಿಗೆ ಕಥೆ, ಕವಿತೆಗಳು ಮಾತನಾಡಲಿವೆ’ ಎನ್ನುವ ವಿಭಿನ್ನ ಕಾರ್ಯಕ್ರಮ ನಡೆಸಲಾಯಿತು.
ತಾಲೂಕಿನ ಯುವ ತಲೆಮಾರಿನ ಕೆಲ ಬರಹಗಾರರು(Writers) ಕೂಡಿಕೊಂಡು ಸ್ವರಚಿತ ಕಥೆ, ಕವನಗಳ ಓದು ಹಾಗೂ ಸಂವಾದ ನಡೆಸಿದರು. ಮಧುರಚನ್ನ, ಬೇಂದ್ರೆ, ಕುವೆಂಪು, ಕೆ.ಎಸ್ ನರಸಿಂಹಸ್ವಾಮಿ, ಶರಣರು ತಮ್ಮ ಬರಹದ ಮೇಲೆ ಯಾವ ರೀತಿ ಪ್ರಭಾವ ಬೀರಿದ್ದಾರೆ? ಕಥೆ(Story), ಕವಿತೆ(Poetry) ಹುಟ್ಟಿದ ಕಾಲ, ಹಿನ್ನಲೆ, ಭಾಷೆ, ಲೇಖಕ ಏನನ್ನು ಮುಖ್ಯವಾಗಿ ಇಲ್ಲಿ ಹೇಳಲು ಹೊರಟಿದ್ದಾನೆ ಅನ್ನೋದು ಸೇರಿದಂತೆ ಹಲವು ಆಯಾಮಗಳಲ್ಲಿ ಚರ್ಚಿಸಲಾಯಿತು.
ಇಲ್ಲಿ ಯಾವುದೇ ರೀತಿಯ ಅಧ್ಯಕ್ಷತೆ, ಉದ್ಘಾಟಕರು, ಅತಿಥಿಗಳು, ಹಾರ, ಶಾಲು ಎನ್ನುವ ಗೋಜಿಗೆ ಹೋಗದೆ ಕಥೆ, ಕಾವ್ಯಕ್ಕೆ ಒತ್ತು ನೀಡಿ ಅನುಸಂಧಾನ ನಡೆಸಲಾಯಿತು. ಈ ವೇಳೆ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಕಾಸಪ ಅಧ್ಯಕ್ಷ ಶಿವಾನಂದ ಬಡಾನವರ, ಕಾಸಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ಹಾಗೂ ಬರಹಗಾರ ನಾಗೇಶ ತಾಳವಾರ, ಸಹ ಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಬರಹಗಾರರಾದ ಅಶೋಕ ಬಿರಾದಾರ, ರಾಚು ಕೊಪ್ಪ, ಗುರುಭೀಮಸುತ ಸಿದ್ರಾಮ ಬ್ಯಾಕೋಡ, ಜಗದೀಶ ಚಲವಾದಿ, ಬಸವರಾಜ ಅಗಸರ, ಗುಂಡಣ್ಣ ಕುಂಬಾರ, ಶಿಕ್ಷಕರಾದ ಸಂಜೀವಕುಮಾರ ಡಾಂಗಿ, ಬಸವರಾಜ ಕುರನಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.