ಪ್ರಜಾಸ್ತ್ರ ಸುದ್ದಿ
ಕಣ್ಣೂರು(Kannoru): ಇದು ನಿಜಕ್ಕೂ ಅತ್ಯಂತ ಕರುಣಾಜನಕ ಘಟನೆ. ಪುಟ್ಟ ಮಕ್ಕಳಿಬ್ಬರನ್ನು ಪತ್ನಿಯ ಸುಪರ್ದಿಗೆ ಕೊಡಲು ಕೋರ್ಟ್ ಆದೇಶ ಮಾಡಿರುವ ಬೆನ್ನಲ್ಲೇ, ತಂದೆಯೊಬ್ಬ ತನ್ನೆರಡು ಮಕ್ಕಳಿಗೆ ವಿಷವುಣಿಸಿ ತಾಯಿಯೊಂದಿಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ರಾಮಂತಳ್ಳಿಯಲ್ಲಿ ನಡೆದಿದೆ.
ಕಲಾಧರನ್(36), ಇವನ ಮಕ್ಕಳಾದ ಹಿಮಾ(06), ಕಣ್ಣನ್(02) ಹಾಗೂ ತಾಯಿ ಉಷಾ(65) ಮೃತ ದುರ್ದೈವಿಗಳು. ಕಲಾಧರನ್ ಹಾಗೂ ಪತ್ನಿಯ ನಡುವೆ ಜಗಳವಾದ ಕಾರಣ ಬೇರೆಯಾಗಿ ವಾಸಿಸುತ್ತಿದ್ದರು. ಇವರ ಪ್ರಕರಣ ಕೋರ್ಟ್ ನಲ್ಲಿತ್ತು. ಅಲ್ಲದೆ ಮಕ್ಕಳಿಬ್ಬರು ಬಗ್ಗೆ ಸಹ ವಿಚಾರಣೆ ನಡೆದಿದೆ. ಇತ್ತೀಚೆಗೆ ಕೋರ್ಟ್ ಮಕ್ಕಳನ್ನು ತಾಯಿಯ ಸುಪರ್ದಿಗೆ ಕೊಡುವಂತೆ ಆದೇಶಿಸಿದೆ. ಹೀಗಾಗಿ ಪೊಲೀಸರು ಕಲಾಧರನ್ ತಂದೆ ಉಣ್ಣಿಕೃಷ್ಣನ್ ಗೆ ಫೋನ್ ಮಾಡಿ ಡಿಸೆಂಬರ್ 23ರಂದು ಮಕ್ಕಳನ್ನು ತಾಯಿಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಮಕ್ಕಳನ್ನು ಪತ್ನಿಗೆ ಒಪ್ಪಿಸಲು ಒಪ್ಪಿಗೆ ಇಲ್ಲದ ಕಲಾಧರನ್ ಪುಟ್ಟ ಮಕ್ಕಳಿಗೆ ವಿಷವುಣಿಸಿದ್ದಾನೆ. ಬಳಿಕ ತನ್ನ ತಾಯಿಯೊಂದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ತಂದೆ ಉಣ್ಣಿಕೃಷ್ಣನ್ ಆಟೋ ಓಡಿಸುತ್ತಿದ್ದು ಸಂಜೆ ಮನೆಗೆ ಬಂದು ಎಷ್ಟೇ ಕೂಗಿದರೂ ಬಾಗಿಲು ತೆಗೆದಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಬಾಗಿಲು ತೆಗೆದು ಒಳಗೆ ಹೋದಾಗ ಕರುಣಾಜನಕ ದೃಶ್ಯ ಕಂಡಿದೆ. ಚಿಕ್ಕ ಮಕ್ಕಳಿದ್ದ ಕಾರಣಕ್ಕೆ ಕೋರ್ಟ್ ತಾಯಿ ಬರಲು ಇರಲು ಹೇಳಿ, ತಂದೆಗೆ ಅವರನ್ನು ನೋಡಿಕೊಂಡು ಬರಲು ಅವಕಾಶ ಮಾಡಿಕೊಡುವುದು ಸಾಮಾನ್ಯ. ಆದರೆ, ಹಠವೋ ಅಥವ ಇನ್ಯಾವ ಕಾರಣವೋ ಗೊತ್ತಿಲ್ಲ ಗಂಡ ಹೆಂಡ್ತಿಯ ಜಗಳದ ನಡುವೆ ಮಕ್ಕಳು, ಅಜ್ಜಿ ಬಲಿಯಾಗಿದ್ದಾರೆ.




