ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಧಾನಸೌಧ ಗ್ರಾಂಡ್ ಸ್ಟೆಪ್ಸ್ ನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿದ್ದರು. ಈ ವೇಳೆ ಯುವಕನೋರ್ವ ವೇದಿಕೆಯತ್ತ ನುಗ್ಗಿ ಬಂದ ಘಟನೆ ನಡೆದಿದೆ. ಹೀಗಾಗಿ ಇದನ್ನು ಭದ್ರತಾ ವೈಫಲ್ಯ ಎಂದು ಹೇಳಲಾಗುತ್ತಿದೆ. ಮಾನವ ಸರಪಳಿ ಕಾರ್ಯಕ್ಕೆ ಸಿಎಂ ಚಾಲನೆ ನೀಡಿದರು.
ಶಾಲು ಹಾಕಿಕೊಂಡಿದ್ದ ಯುವಕ ವೇದಿಕತ್ತ ನುಗ್ಗಿದ್ದಾನೆ. ಈ ವೇಳೆ ಸಿಎಂ ಸೇರಿ ಎಲ್ಲರೂ ಒಂದು ಕ್ಷಣ ಗಾಬರಿಯಾಗಿದ್ದಾರೆ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಹೀಗಾಗಿ ಈ ವೇಳೆ ಹೈಡ್ರಾಮಾ ನಡೆಯಿತು. ವಿಧಾನಸೌಧ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.