Ad imageAd image

ಸಿಂದಗಿ: ಭೀಕರ ಅಪಘಾತದಲ್ಲಿ ಪಟ್ಟಣದ ಯುವಕ ಸಾವು

Nagesh Talawar
ಸಿಂದಗಿ: ಭೀಕರ ಅಪಘಾತದಲ್ಲಿ ಪಟ್ಟಣದ ಯುವಕ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಕನ್ನೊಳ್ಳಿ ಟೋಲ್ ಗೇಟ್ ಸಮೀಪ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸಿಂದಗಿ ಪಟ್ಟಣದ ನಿವಾಸಿ ಅಭಿಷೇಕ ಸಾಹೇಬಗೌಡ ನಾಗರಾಳ ಮೃತ ದುರ್ದೈವಿ ಯುವಕ ಎಂದು ತಿಳಿದು ಬಂದಿದೆ.

ವಿಜಯಪುರ ಬಸ್ ಡಿಪೋಗೆ ಸಂಬಂಧಿಸಿದ ಕೆಎ 28 ಎಫ್ 2095 ನಂಬರ್ ನ ಬಸ್ ಇದಾಗಿದ್ದು, ಕೆಎ 28 ಹೆಚ್ ಕೆ 2551 ನಂಬರ್ ನ ಬೈಕ್ ಮಧ್ಯ ಮಂಗಳವಾರ ಮಧ್ಯಾಹ್ನ ಸುಮಾರು 12.20ರ ಸಮಯದಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಬಸ್, ಬೈಕ್ ಅಲ್ಲದೆ ಯುವಕ ಸಹ ಸುಟ್ಟು ಹೋಗಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article