ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಇತ್ತೀಚೆಗೆ ಕಾಡಿನಿಂದ ನಾಡಿಗೆ ಚಿರತೆಗಳು ಬರುತ್ತಿರುವುದು ಹೆಚ್ಚಾಗಿದೆ. ವಿಜಯಪುರದಲ್ಲಿಯೂ ಚಿರತೆ ಹಾವಳಿ ಶುರುವಾಗಿದೆ. ಅತ್ತ ತುಮಕೂರಿನಲ್ಲಿಯೂ ಚಿರತೆ ಕಾಣಿಸಿಕೊಂಡಿದೆ. ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ 5 ವರ್ಷದ ಚಿರತೆ ಕಾಣಿಸಿಕೊಂಡಿದೆ. ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದು, ಎಲ್ಲರಿಗೂ ಶಾಕ್ ಆಗಿದೆ. ಆತನ ಧೈರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.
ಅರಣ್ಯ ಸಿಬ್ಬಂದಿ ಚಿರತೆ ಹಿಡಿಯಲು ಸಜ್ಜಾಗಿದ್ದರು. ಆದರೆ ಅವರಿಂದ ಅದನ್ನು ಹಿಡಿಯಲು ಸಾಧ್ಯವಾಗಿಲ್ಲ. ಈ ವೇಳೆ ಗ್ರಾಮದ ಆನಂದ್ ಎನ್ನುವ ಯುವಕ ಅದರ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ. ಇದನ್ನು ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಒಂದು ಕ್ಷಣ ಶಾಕ್ ಆಗಿದ್ದಾರೆ. ಇದರ ಜೊತೆಗೆ ಆನಂದನ ಸಾಹಸಕ್ಕೆ ಶಹಬ್ಬಾಸ್ ಹೇಳಿದ್ದಾರೆ.