Ad imageAd image

ಎಲ್ಲವೂ ಇರುವಾಗ ಇಲ್ಲದ ಆಸೆಗೆ ಯುವತಿ ಬಲಿ

Nagesh Talawar
ಎಲ್ಲವೂ ಇರುವಾಗ ಇಲ್ಲದ ಆಸೆಗೆ ಯುವತಿ ಬಲಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಧಾರವಾಡ(Dharwad): ಇವತ್ತಿನ ಸಾಮಾಜಿಕ ಜಾಲತಾಣದ ರಂಗೀನ್ ಪ್ರಪಂಚವೇ ಎಲ್ಲ ಎಂದುಕೊಂಡ ಯುವ ಜನತೆ ತಪ್ಪು ಹಾದಿ ತುಳಿಯುತ್ತಿದ್ದಾರೆ. ಮದುವೆಯಾಗಿ ಗಂಡನ ಜೊತೆ ಇರುವಾಗ, ಮತ್ತೊಬ್ಬನ ಸಾಂಗತ್ಯ ಬಯಸಿ ಬಂದು ಇಂದು ಹೆಣವಾಗಿದ್ದಾಳೆ. ಧಾರವಾಡ ನಗರದಲ್ಲಿ 24 ವರ್ಷದ ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶ್ವೇತಾ ಗುಡದಾಪುರ ಮೃತ ದುರ್ದೈವಿ.

ಕೊಪ್ಪಳ ಜಿಲ್ಲೆ ಗಜೇಂದ್ರಗಡದ ಯುವತಿಯನ್ನು ಸುಮಾರು ನಾಲ್ಕೈದು ವರ್ಷಗಳ ಹಿಂದೆ ರಾಮದುರ್ಗ ಮೂಲದ ಯುವಕ ವಿಶ್ವನಾಥ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಧಾರವಾಡದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಹೀಗಾಗಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕಳೆದ ಒಂದೂವರೆ ವರ್ಷದ ಹಿಂದೆ ಗಂಡನ ಮನೆ ಬಿಟ್ಟು ಸೀದಾ ಧಾರವಾಡಕ್ಕೆ ಬಂದಿದ್ದಳು. ಶಿವಳ್ಳಿ ಗ್ರಾಮದ ಯುವಕ ಶ್ರೀನಗರದಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಅಲ್ಲಿ ಇಟ್ಟಿದ್ದ. ಆಕೆ ಪಾಲಕರು, ಪತಿ ವಿಶ್ವನಾಥ ಕರೆದುಕೊಂಡು ಹೋಗಲು ಬಂದಾಗ ಅವರಿಗೆ ಬೆದರಿಕೆ ಹಾಕಿದ್ದನಂತೆ.

ಧಾರವಾಡದಿಂದಲೇ ಗಂಡನಿಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಳು. ಆದರೆ, ಈಕೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳುತ್ತಲೇ ಬಂದಿದ್ದ ಯವಕ ಹಾಗೂ ಇವಳ ನಡುವೆ ಏನಾಗಿದೆಯೋ ಗೊತ್ತಿಲ್ಲ ಶುಕ್ರವಾರ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಶಿವಳ್ಳಿ ಮೂಲದ ಹುಡುಗನ ವಿರುದ್ಧ ಶ್ವೇತಾಳ ಪೋಷಕರು ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

WhatsApp Group Join Now
Telegram Group Join Now
Share This Article