ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): 70 ವಿಧಾನಸಭಾ ಸದಸ್ಯರ ಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ, 2025ರಲ್ಲಿ ನಡೆಯಲಿದೆ. ಇನ್ನು ಮೂರು ತಿಂಗಳ ಸಮಯವಿದೆ. ಈಗಲೇ ಆಡಳಿತರೂಢ ಆಮ್ ಆದ್ಮಿ ಪಕ್ಷ 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆಪ್ ಪಕ್ಷದ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯ ನಂತರ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
ಕಾಂಗ್ರೆಸ್ ತೊರೆದ ಆಪ್ ಸೇರಿದ ವೀರ್ ಸಿಂಗ್ ದಂಗನ್, ಸೋಮೇಶ್ ಶೋಕೀನ್, ಜುಬೇರ್ ಚೌಧರಿ, ಬಿಜೆಪಿ ಬಿಟ್ಟು ಬಂದ ಅನಿಲ್ ಝಾ, ಬ್ರಹ್ಮ್ ಸಿಂಗ್ ತನ್ವಾರ್, ಬಿ.ಬಿ ತ್ಯಾಗಿ ಸೇರಿದಂತೆ ಆಪ್ ನಾಯಕರಾದ ಗೌರವ್ ಶರ್ಮಾ, ಸರಿತಾ ಸಿಂಗ್, ರಾಮ್ ಸಿಂಗ್ ನೇತಾಜಿ, ದೀಪಕ್ ಸಿಂಘಾಲ್, ಮನೋಜ್ ತ್ಯಾಗಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕಳೆದ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 62ರಲ್ಲಿ ಆಪ್ ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.