Ad imageAd image

‘ಆಪ್-ಕೈ’ಯಿಂದ ಜಾರಿ ‘ಕಮಲ’ಕ್ಕೆ ರಾಷ್ಟ್ರ ರಾಜಧಾನಿ?

Nagesh Talawar
‘ಆಪ್-ಕೈ’ಯಿಂದ ಜಾರಿ ‘ಕಮಲ’ಕ್ಕೆ ರಾಷ್ಟ್ರ ರಾಜಧಾನಿ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿ(Delhi Election) ವಿಧಾನಸಭಾಗೆ ಬುಧವಾರ ಮತದಾನ ನಡೆದಿದೆ. ಇಲ್ಲಿ 1.56 ಕೋಟಿ ಮತದಾರಿದ್ದು, 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಬಾರಿ ಆಡಳಿತ ನಡೆಸಿರುವ ಆಮ್ ಆದ್ಮಿ ಪಾರ್ಟಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಆದರೆ, ಚುನಾವಣೋತ್ತರ ಸಮೀಪಕ್ಷೆ(Exit Poll) ಬೇರೆಯದ್ದೇ ಹೇಳುತ್ತಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಕನಸು ನುಚ್ಚುನೂರಾಗುವ ಸಾಧ್ಯತೆಯಿದೆಯಂತೆ. ಇನ್ನು ಕಾಂಗ್ರೆಸ್ ಗೆಲುವು ಕನಸಿನ ಮಾತಾಗಿದೆ.

ಚಾಣಿಕ್ಯ ಸಮೀಕ್ಷೆ ಪ್ರಕಾರ ಬಿಜೆಪಿ 39-44, ಆಪ್ 25-28, ಕಾಂಗ್ರೆಸ್ 2-3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪೀಪಲ್ ಪಲ್ಸ್ ಪ್ರಕಾರ ಬಿಜೆಪಿ 51-60, ಆಪ್ 10-19, ಕಾಂಗ್ರೆಸ್ ಶೂನ್ಯ. ಜೆವಿಸಿ ಸಮೀಕ್ಷೆ ಪ್ರಕಾರ ಬಿಜೆಪಿ 39-45, ಆಪ್ 22-21, ಕಾಂಗ್ರೆಸ್ 0-2,  ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಬಿಜೆಪಿ ಹಾಗೂ ಆಪ್ ನಡುವೆ ನೇರಾನೇರ ಫೈಟ್ ಇದೆ. ಬಿಜೆಪಿ 35-40, ಆಪ್ 32-37 ಇದೆ. ಕಾಂಗ್ರೆಸ್ 0-1. ದೈನಿಕ ಭಾಸ್ಕರ್ ಪ್ರಕಾರ ಆಪ್ ಮತ್ತೆ ಗೆಲುವು ಸಾಧಿಸಲಿದೆ. ಆಪ್ 43-47, ಬಿಜೆಪಿ 23-27, ಕಾಂಗ್ರೆಸ್ 0-1 ಸ್ಥಾನ ಪಡೆಯಲಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ದೆಹಲಿ ಒಲಿಯಲಿದೆ ಎಂದು ಹೇಳಿದ್ದು, ಫಲಿತಾಂಶದಂದು ಸ್ಪಷ್ಟ ಚಿತ್ರಣ ಸಿಗಲಿದೆ.

WhatsApp Group Join Now
Telegram Group Join Now
Share This Article