ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಹೊಸ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಯುವಕನ ಬಾಳಿನಲ್ಲಿ ಘೋರ ದುರಂತ ನಡೆದಿದೆ. ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಜಿಲ್ಲೆಯ ಗೌರಾಪುರದಲ್ಲಿ ಅಪಘಾತ ನಡೆದಿದೆ. ಹಾನಗಲ್ ತಾಲೂಕಿನ ವರ್ದಿ ಗ್ರಾಮದ ನಾಗರಾಜ ಪವಾಡಿ(35) ಮೃತ ದುರ್ದೈವಿ.
ಹೊಸ ಬೈಕ್ ಖರೀದಿಸಿ ಇಬ್ಬರು ಬೈಕ್ ನಲ್ಲಿ ತೆರಳುತ್ತಿದ್ದರು. ಆದರೆ, ಗೌರಾಪುರದ ಗ್ರಾಮದ ಹತ್ತಿರ ಬರುತ್ತಿದ್ದಂತೆ ಲಾರಿ ನಡುವೆ ಅಪಘಾತವಾಗಿದೆ. ನಾಗರಾಜ ಮೃತಪಟ್ಟಿದ್ದಾನೆ. ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾನಗಲ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.