ಪ್ರಜಾಸ್ತ್ರ ಸುದ್ದಿ
ಕಾರ್ಕಳ(Karkal): ಉಡುಪಿ ಜಿಲ್ಲೆಯ ಕಾರ್ಕಳ ಬಳಿ ಕ್ರೂಸರ್ ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ವೇಳೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪುರದ 12 ಜನರು ಕ್ರೂಸರ್ ನಲ್ಲಿ ಉಡುಪಿಗೆ ಪ್ರವಾಸಕ್ಕೆ ಹೋಗಿದ್ದರಂತೆ. ಶನಿವಾರ ಸಂಜೆ ಕಾರ್ಕಳ್ ಬಳಿ ಬಸ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕ್ರೂಸರ್ ಚಾಲಕ ಮಾನಪ್ಪ(30), ಮಲ್ಲಮ್ಮ(45), ರೋಹಿದಾಸ ಮಾದರ(19) ಹಾಗೂ ಚೇತನ ಮಾದರ(18) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ಇನ್ನು ಸಂಗೀತಾ ಎಂಬುವರ ಕೈ ಹಾಗೂ ಕಾಲು ಕಟ್ ಆಗಿದೆ ಎನ್ನಲಾಗುತ್ತಿದೆ. 9 ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.




