ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನೀಚ ಕೃತ್ಯವನ್ನು ಬಿಹಾರ ಮೂಲದ ಯುವಕ ಮಾಡಿದ್ದಾನೆ. 6 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮನುಷ್ಯ ರೂಪದ ರಾಕ್ಷಸ ಬಿಹಾರ ಮೂಲದ ಅಭಿಷೇಹಲ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಕೂಲಿ ಕಾರ್ಮಿಕನಾಗಿದ್ದಾನೆ. ಬಾಲಕಿಯ ಹೆತ್ತವರು ಸಹ ಕೂಲಿ ಕಾರ್ಮಿಕರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿರಾತಕ ಹೀನ ಕೃತ್ಯವೆಸಗಿದ್ದಾನೆ.
ಇತ್ತೀಚೆಗಷ್ಟೇ ಮೂರು ಹಸುಗಳ ಕೆಚ್ಚಲು ಕೊಯ್ದ ನೀಚ ಸಹ ಬಿಹಾರ ಮೂಲದವನಾಗಿದ್ದಾನೆ. ಆ ಘಟನೆಯ ಆಕ್ರೋಶದ ನಡುವೆ, ಮತ್ತೊಬ್ಬ ಬಿಹಾರದ ಮೂಲದ ಕ್ರೂರಿ ಏನೂ ಅರಿಯದ ಪುಟ್ಟ ಕಂದನನ್ನ ತನ್ನ ಕಾಮದಾಹಕ್ಕೆ ಬಲಿಪಡೆದಿದ್ದಾನೆ. ಮಗುವನ್ನು ಕಳೆದುಕೊಂಡ ಹೆತ್ತವರು ಒಡಲಿಗೆ ಬೆಂಕಿ ಬಿದ್ದಂತಾಗಿದೆ.