Ad imageAd image

ಖೇಲೋ ಇಂಡಿಯಾ: ವಿಜಯಪುರ ಕ್ರೀಡಾಪಟುಗಳ ಸಾಧನೆ

ಚೆನ್ನೈನಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 1ರ ತನಕ ನಡೆದ ಖೇಲೋ ಇಂಡಿಯಾ ಮಹಿಳಾ ಲೀಗ್ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ 7 ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.

Nagesh Talawar
ಖೇಲೋ ಇಂಡಿಯಾ: ವಿಜಯಪುರ ಕ್ರೀಡಾಪಟುಗಳ ಸಾಧನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಚೆನ್ನೈನಲ್ಲಿ(chennai) ಆಗಸ್ಟ್ 31 ರಿಂದ ಸೆಪ್ಟೆಂಬರ್ 1ರ ತನಕ ನಡೆದ ಖೇಲೋ ಇಂಡಿಯಾ(khelo india women’s league) ಮಹಿಳಾ ಲೀಗ್ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ 7 ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಗೆಣ್ಣೂರು, ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕಿರಿಯ ಬಾಲಕಿಯರ ವಿಭಾಗದಲ್ಲಿ ಕೋಕಿಲಾ ಚವ್ಹಾಣ ಚಿನ್ನದ ಪದಕ, ಜ್ಯೋತಿ ರಾಠೋಡ ಬೆಳ್ಳಿ ಪದಕ ಹಾಗೂ ದೀಪಿಕಾ ಪಢತರೆ ಕಂಚಿನ ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ತೋರಿಸಿದ್ದಾರೆ. ಕಿರಿಯ ಮಹಿಳಾ ವಿಭಾಗದಲ್ಲಿ ಪಾಯಲ್ ಚವ್ಹಾಣ ಚಿನ್ನ, ಆರಾಧನಾ ಸಂತೋಷ ಬೆಳ್ಳಿ ಹಾಗೂ ಅಕ್ಷತಾ ಭೂತನಾಲ, ಅಕ್ಷತಾ ಬಿರಾದಾರ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಸೈಕ್ಲಿಂಗ್(cycling) ಕೋಚ್ ಅಲ್ಕಾ ಎನ್.ಪಢತರೆ, ಖೇಲೋ ಇಂಡಿಯಾ ಕೋಚ್ ರಮೇಶ ರಾಠೋಡ ಹಾಗೂ ಕಚೇರಿ ಅಧೀಕ್ಷಕರಾದ ಎಸ್.ಬಿ ಕಡಕಲ್ ಅವರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Share This Article