ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟ ಅಜಯ್ ರಾವ್ ನಟನೆ ಹಾಗೂ ನಿರ್ಮಾಣದ ಯುದ್ಧಕಾಂಡ-2 ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಕಳೆದ ವಾರ ಬಿಡುಗಡೆಯಾದ ಸಿನಿಮಾ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಡುವೆ ಸಿನಿಮಾಗೆ ಸಂಕಷ್ಟ ಎದುರಾಗಿದೆ ಎಂದು ನಟ ಮತ್ತು ನಿರ್ಮಾಪಕರಾಗಿರುವ ಅಜಯ್ ರಾವ್ ಹೇಳಿದ್ದಾರೆ. ಮೆಲ್ಟಿಫೆಕ್ಸ್ ಗಳ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಈ ವಾರ ಪರಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಕಾರಣಕ್ಕೆ ಮಲ್ಟಿಫೆಕ್ಸ್ ಗಳಲ್ಲಿ ಯಶಸ್ವಿಯಾಗಿ ಹೋಗುತ್ತಿರುವ ಯುದ್ಧಕಾಂಡ-2 ಚಿತ್ರದ ಸಮಯ ಬದಲಾವಣೆ ಮಾಡುವ ಕುರಿತು ಹೇಳಿದ್ದಾರೆ. ಇದರಿಂದ ನಮ್ಮ ಚಿತ್ರದ ಶೋ ಕಡಿಮೆಯಾಗಲಿವೆ. ಈ ಬಗ್ಗೆ ಫಿಲ್ಮ್ ಚೇಂಬರ್, ಕನ್ನಡಪರ ಸಂಘಟನೆಗಳು, ಕಲಾವಿದರ ಸಂಘ ಪ್ರಶ್ನೆ ಮಾಡಬೇಕಿದೆ ಎಂದಿದ್ದಾರೆ. ಈಗಾಗ್ಲೇ ಸಾಕಷ್ಟು ಸಾಲ ಮಾಡಿಕೊಂಡು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ಚಿತ್ರ ಮಾಡಿದ್ದಾರೆ. ಇದು ಅವರಿಗೆ ಎಷ್ಟೊಂದು ಸಕ್ಸಸ್ ಕೊಟ್ಟಿದೆ. ಲಾಭ ತಂದಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.