Ad imageAd image

ಮಹಿಳೆ ಸಾವು ಪ್ರಕರಣ: ವಿಚಾರಣೆಗೆ ಬಂದ ನಟ ಅಲ್ಲು ಅರ್ಜುನ್

Nagesh Talawar
ಮಹಿಳೆ ಸಾವು ಪ್ರಕರಣ: ವಿಚಾರಣೆಗೆ ಬಂದ ನಟ ಅಲ್ಲು ಅರ್ಜುನ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hyderabad): ಪುಷ್ಪ-2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಮಹಿಳೆಯೊಬ್ಬರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಈ ಸಂಬಂಧ ನಟ ಅಲ್ಲು ಅರ್ಜುನ್, ಥಿಯೇಟರ್ ಮಾಲೀಕ ಹಾಗೂ ನಟನ ಭದ್ರತಾ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ನಟ ಅಲ್ಲು ಅರ್ಜುನ್ ಮಂಗಳವಾರ ಚಿಕ್ಕಡಪಲ್ಲಿ ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ಡಿಸೆಂಬರ್ 4ರಂದು ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಪ್ರೀಮಿಯರ ಶೋ ಆಯೋಜಿಸಲಾಗಿತ್ತು. ಅಲ್ಲಿಗೆ ನಟ ಅಲ್ಲು ಅರ್ಜುನ್ ಬಂದಿದ್ದರು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ನೂಕುನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ 35 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆ ಮಗ ಗಾಯಗೊಂಡಿದ್ದಾನೆ. ಮಗು ಚಿಕಿತ್ಸೆ ಪಡೆಯುತ್ತಿದೆ. ಡಿಸೆಂಬರ್ 13ರಂದು ನಟನ ಬಂಧನವಾಗಿ ಕೋರ್ಟ್ ಮುಂದೆ ಬಂದು 4 ವಾರಗಳ ಮಧ್ಯಂತರ ಜಾಮೀನು ನೀಡಿತು. ಮರುದಿನ ಜೈಲಿನಿಂದ ನಟ ಬಿಡುಗಡೆಯಾದರು. ಇದೀಗ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article