ಪ್ರಜಾಸ್ತ್ರ ಸುದ್ದಿ
ಲವ್ ಒಟಿಪಿ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ನಟನೆಯ ಜೊತೆಗೆ ನಿರ್ದೇಶನವನ್ನು ಅನೀಶ್ ಮಾಡಿದ್ದಾರೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬಂದಿವೆ. ಆದರೆ, ಜನರು ಥಿಯೇಟರ್ ಗೆ ಬರುತ್ತಿಲ್ಲ. ಬೆಳಗ್ಗೆ ಕಲೆಕ್ಷನ್ ನೋಡಿದಾಗ ತುಂಬಾ ನೋವಾಯಿತು. ಅನೀಶ್ ಚಿತ್ರರಂಗಕ್ಕೆ ಅರ್ಹನಲ್ಲವಾ ಅನ್ನೋ ಪ್ರಶ್ನೆ ನನಗೆ ಶುರುವಾಗಿದೆ ಎಂದು ವಿಡಿಯೋ ಮಾಡಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನನಗೆ ಯಾರೂ ಇಲ್ಲ. ನಾನು ಒಬ್ಬಂಟಿ. ಜನರನ್ನು ತಲುಪಲು ನಾನು ಇನ್ನು ಏನೇನು ಮಾಡಬೇಕು ತಿಳಿತಿಲ್ಲ. 14 ವರ್ಷದ ನನ್ನ ಕರಿಯರ್ ನಲ್ಲಿ ಈ ರೀತಿಯ ಬ್ಲಾಕ್ ಬ್ಲಸ್ಟರ್ ರಿವೀವ್ ಯಾವತ್ತೂ ಬರಲಿಲ್ಲ. ಇಷ್ಟೊಂದು ಬ್ಲಾಕ್ ಬ್ಲಸ್ಟರ್ ರಿವೀವ್ ಬಂದರೂ ನಾನು ರೀಚ್ ಆಗಲು ಆಗ್ತಿಲ್ಲವಾ? ಜನನ ಸೆಳೆಯಲು ಆಗ್ತಿಲ್ಲವಾ? ನನಗೆ ಬರೀ ನಟನೆ ಮಾಡಿಕೊಂಡು ಇರು ಅಂದರೆ ಅದು ಆಗದೆಯಿರುವ ಕೆಲಸ. ಎಲ್ಲವೂ ನಾನೇ ಮಾಡಬೇಕು. ಇವತ್ತು ವೀಕೆಂಡ್. ನನ್ನ ಉಳಿಸಬೇಕು ಎಂದರೆ ಈ ಎರಡು ದಿನ. ಇಲ್ಲದಿದ್ದರೆ ಇದು ನನ್ನ ಕೊನೆಯ ಪ್ರಯತ್ನ ಎಂದು ತುಂಬಾ ಭಾವುಕರಾಗಿ ಹೇಳಿದ್ದಾರೆ.




