Ad imageAd image

ಮತ್ತೆ ಹೆಣ್ಮಗು ಆಗುತ್ತದೆ ಎನ್ನುವ ಭಯ, ನಟ ಚಿರಂಜೀವಿ ಮಾತಿಗೆ ಆಕ್ರೋಶ

Nagesh Talawar
ಮತ್ತೆ ಹೆಣ್ಮಗು ಆಗುತ್ತದೆ ಎನ್ನುವ ಭಯ, ನಟ ಚಿರಂಜೀವಿ ಮಾತಿಗೆ ಆಕ್ರೋಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ(Actor Chiranjeevi) ಇತ್ತೀಚೆಗೆ ಹೇಳಿದ ಮಾತಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಪುತ್ರ ರಾಮ್ ಚರಣ್ ನಟನೆಯ ಬ್ರಹ್ಮ ಆನಂದಂ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನಾನು ಮನೆಯಲ್ಲಿದ್ದಾಗ ಮೊಮ್ಮಕ್ಕಳು ಸುತ್ತುವರಿದಿರುತ್ತಾರೆ. ಆಗ ನನಗೆ ಹೆಣ್ಮಕ್ಕಳ ಹಾಸ್ಟೆಲ್ ನಲ್ಲಿ ಇದೀನಿ ಎನ್ನುವಂತೆ ಆಗುತ್ತೆ. ಯಾಕಂದರೆ ಮೊಮ್ಮಗನೇ ಇಲ್ಲ. ಅಲ್ಲದೆ ಚರಣ್ ನನಗೆ ಒಂದು ಮೊಮ್ಮಗ ಕೊಡು. ನಮ್ಮ ಪರಂಪರೆ ಮುಂದುವರೆಸಿಕೊಂಡು ಹೋಗಲು ಎಂದು ಹೇಳುತ್ತಾರೆ.

ಹಿರಿಯ ನಟ ಚಿರಂಜೀವಿ ಅವರ ಮಾತುಗಳನ್ನು ಅಲ್ಲಿದ್ದು ಕೇಳಿಸಿಕೊಂಡಿರುವವರು ನಕ್ಕು ಚಪ್ಪಾಳೆ ತಟ್ಟುತ್ತಾರೆ. ಆದರೆ ಪರಂಪರೆ ಮುಂದುವರೆಸಲು ಗಂಡು ಮಗನೇ ಬೇಕು ಎನ್ನುವುದು ಎಷ್ಟು ಸರಿ ಎಂದಿದ್ದಾರೆ. ಪರಂಪರೆಯನ್ನು ಬರೀ ಗಂಡ್ಮಕ್ಕಳೆ ಮುಂದುವರೆಸಿಕೊಂಡು ಹೋಗುತ್ತಾರೆಯೇ? ಇದು ಸ್ತ್ರೀ ದ್ವೇಷಿಯಾಗಿ ಕಾಣಿಸಿತು. ನಿಮ್ಮ ಮಗ ಮತ್ತು ಸೊಸೆ ಮತ್ತೊಂದು ಮಗಳು ಕೊಡುತ್ತಾರೆ ಅನ್ನೋದು ನಿಮಗೆ ಸಮಸ್ಯೆಯಾಗಿ ಕಾಡುತ್ತಿದೆಯೇ ಅಥವ ಬ್ರಹ್ಮ ಆನಂದಂ ಚಿತ್ರದ ಕಾರ್ಯಕ್ರಮದಲ್ಲಿ ತಮಾಷೆ ಮಾಡಿದ ಟೀಕೆಯೇ ಎಂದು ಪ್ರಶ್ನಿಸಲಾಗಿದೆ. ಒಟ್ಟಿನಲ್ಲಿ ಗಂಡು, ಹೆಣ್ಣು ಎನ್ನುವ ಭೇದ ಇಷ್ಟು ದೊಡ್ಡ ಸ್ಟಾರ್ ನಟರಲ್ಲಿಯೂ ಇರುವುದು ದುರಂತ ಎನ್ನುತ್ತಿದ್ದಾರೆ.

WhatsApp Group Join Now
Telegram Group Join Now
Share This Article