ಪ್ರಜಾಸ್ತ್ರ ಸುದ್ದಿ
ಚೆನ್ನೈ: ತಮಿಳುನಾಡು ಚಿತ್ರರಂಗಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧಿವಿದೆ. ಇಲ್ಲಿಯ ಮತದಾರರು ನಟ, ನಟಿಯರನ್ನು ಶಾಸಕರಿಂದ ಹಿಡಿದು ಸಿಎಂ, ಸಂದರು, ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಹೀಗಾಗಿ ಇಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷಗಳಿವೆ. ಅಂತಹ ಪಕ್ಷಗಳ ಸಾಲಿಗೆ ಸೂಪರ್ ಸ್ಟಾರ್ ನಟ ದಳಿಪತಿ(thalapathy vijay) ವಿಜಯ್ ಅವರು ‘ತಮಿಳಿಗ(Tamizhaga Vetri Kazhagam) ವೆಟ್ರಿ ಕಳಗಂ’ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಅದರ ಬಾವುಟನ್ನು ಇಂದು(ಗುರುವಾರ) ಬಿಡುಗಡೆ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಪಕ್ಷದ(TVK) ಬಾವುಟ(flag) ಬಿಡುಗಡೆಗೊಳಿಸಲಾಗಿದೆ. ಎರಡು ಕಡೆ ಕಂದು ಬಣ್ಣವಿದೆ. ಮಧ್ಯದಲ್ಲಿ ಹಳದಿ ಬಣ್ಣವಿದೆ. ಎಡ ಹಾಗೂ ಬಲಕ್ಕೆ ಆನೆಗಳಿವೆ. ಮಧ್ಯದಲ್ಲಿ ನವಿಲು ಇದ್ದು, ಸುತ್ತಲು ನಕ್ಷತ್ರಗಳಿವೆ. ಈ ಮೂಲಕ ತಮಿಳುನಾಡಿನ ಮಣ್ಣಿನ ಸಂದೇಶವನ್ನು ಇದರಲ್ಲಿ ಹೇಳಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಪಕ್ಷದ ಹೆಸರು ಘೋಷಣೆ ಮಾಡುವ ಮೂಲಕ ರಾಜಕೀಯಕ್ಕೆ ಬರುವ ಬಗ್ಗೆ ಹೇಳಿದ್ದರು. ಈಗ ಬಾವುಟ ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ನಟ ವಿಜಯ್, ಎಲ್ಲರೂ ಮೊದಲು ಸಮಾವೇಶಕ್ಕಾಗಿ ಕಾಯುತ್ತಿರುವುದು ನನಗೆ ಗೊತ್ತು. ಅದರ ತಯಾರಿ ನಡೆಯುತ್ತಿದೆ. ಶೀಘ್ರದಲ್ಲಿ ತಿಳಿಸಲಾಗುವುದು. ಪಕ್ಷದ ಬಾವುಟ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಹೆಮ್ಮೆ ಇದೆ. ನಾವೆಲ್ಲ ಕೂಡಿಕೊಂಡು ತಮಿಳುನಾಡು ಅಭಿವೃದ್ಧಿಗಾಗಿ ಕೆಲಸ ಮಾಡೋಣ. ಇನ್ಮುಂದೆ ತಮಿಳುನಾಡು ಉತ್ತಮವಾಗಲಿದೆ. ಜಯ ಸಿಗಲಿದೆ ಎಂದಿದ್ದಾರೆ. 50 ವರ್ಷದ ದಳಪತಿ ವಿಜಯ್ ಅವರು ರಾಜಕೀಯ ಇನ್ನಿಂಗ್ಸ್ ಶುರು ಮಾಡಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳಸುತ್ತಿದ್ದಾರೆ.