ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Benagaluru): ನಟ ಧ್ರುವ್ ಸರ್ಜಾ ವಿರುದ್ಧ 3.15 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ರಾಘವೇಂದ್ರ ಹೆಗ್ಡೆ ಈ ಆರೋಪವನ್ನು ಮಾಡಿದ್ದು, ಮುಂಬೈನಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಧ್ರುವ್ ಸರ್ಜಾ ಮ್ಯಾನೇಜರ್ ಅಲ್ಲಗಳೆದಿದ್ದಾರೆ. ಕೋರ್ಟಿಗೆ ಹೋಗಿದ್ದಾರೆ. ಕೋರ್ಟ್ ನಲ್ಲೇ ಇತ್ಯರ್ಥವಾಗುತ್ತೆ ಎಂದಿದ್ದಾರೆ.
2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಕೊಟ್ಟಿದ್ದರು. ನಂದಿನಿ ಎಂಟರ್ ಟೇನ್ ಮೆಂಟ್ ನಿಂದ 20 ಲಕ್ಷ ರೂಪಾಯಿ, ರಘವೇಂದ್ರ ಕಡೆಯಿಂದ 2.95 ಲಕ್ಷ ರೂಪಾಯಿ ನೀಡಲಾಗಿತ್ತು. ನಂದಿನಿ ಸಂಸ್ಥೆ ಹಾಗೂ ರಾಘವೇಂದ್ರ ನಡುವೆ ಯಾವುದೋ ಸಮಸ್ಯೆ ಆಯಿತು. ಅವರಿಗೆ 20 ಲಕ್ಷ ರೂಪಾಯಿ ವಾಪಸ್ ಕೊಟ್ಟಿದ್ದೇವೆ. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಬೇಕಿತ್ತು. ಅವರು ಮೂರು ತಿಂಗಳ ಸಮಯ ಕೇಳಿದರು. ಮುಂದೆ ನೂರಾರು ಬಾರಿ ಫೋನ್ ಮಾಡಿದರೂ ಬ್ಯುಸಿ ಎನ್ನುತ್ತಿದ್ದರು.
ನಾಲ್ಕುವರೆ ವರ್ಷದ ಬಳಿಕ ಅರ್ಧ ಸ್ಕ್ರಿಪ್ಟ್ ಕಳಿಸಿದರು. ಇದನ್ನು ಕನ್ನಡದಲ್ಲಿ ಬೇಡ. ಹಿಂದಿ ಹಾಗೂ ತೆಲುಗುದಲ್ಲಿ ಮಾಡೋಣ ಎಂದರು. ಇದಕ್ಕೆ ಧ್ರುವ್ ಒಪ್ಪಲಿಲ್ಲ. ಮಾಡುವುದಾದರೆ ಕನ್ನಡದಲ್ಲಿಯೇ ಮಾಡೋಣ ಎಂದರು. ಕಳೆದ ಜೂಣ್ 28ರಂದು ಭೇಟಿಯಾದಾಗ ಮತ್ತೆ ಅದೇ ಮಾತು ಹೇಳಿದರು. ಧ್ರುವ್ ಅದಕ್ಕೆ ಒಪ್ಪಲಿಲ್ಲ. ಆಯ್ತು ಕನ್ನಡದಲ್ಲಿಯೇ ಮಾಡೋಣ ಎಂದರು. ಅಕ್ಟೋಬರ್ ನಲ್ಲಿ ಡೇಟ್ಸ್ ಬೇಕು ಎಂದರು. ಅದಕ್ಕೆ ಒಪ್ಪಲಾಯಿತು. ಆದರೆ, ಜುಲೈನಲ್ಲಿ ನೋಟಿಸ್ ಕಳಿಸಿದ್ದಾರೆ. ಹಣ ಕೊಡಲ್ಲವೆಂದು ಹೇಳಿಲ್ಲ. ಕುಳಿತು ಮಾತನಾಡಬೇಕಾದ ವಿಚಾರಕ್ಕೆ ಕೋರ್ಟಿಗೆ ಹೋಗಿದ್ದಾರೆ. ಅಲ್ಲಿಯೇ ಆಗಲಿ ಎಂದು ನಟ ಧ್ರುವ್ ಸರ್ಜಾ ಮ್ಯೇನರ್ ಅಶ್ವಿನ್ ಹೇಳುತ್ತಿದ್ದಾರೆ.