ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಜಿಮ್ ಟ್ರೇನರ್ ವೊಬ್ಬರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದ್ರುವ್(dhruva sarja) ಸರ್ಜಾ ಮ್ಯಾನೇಜರ್ ಅಶ್ವಿನರನ್ನು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇ 26ರ ರಾತ್ರಿ ಪ್ರಶಾಂತ್ ಪೂಜಾರಿ ಎಂಬುವರ ಮೇಲೆ ಹಲ್ಲೆ ನಡೆದಿದೆ. ಸುಭಾಷ್, ಹರ್ಷ ಎಂಬುವರ ಹಲ್ಲೆ ಮಾಡಿದ್ದಾರೆ.
ಜಿಮ್ ಟ್ರೇನರ್ ಮೇಲೆ ಹಲ್ಲೆ ಮಾಡಿಸಲು ನಟ ದ್ರುವ್ ಸರ್ಜಾ ಕಾರು ಚಾಲಕನಾಗಿದ್ದ ನಾಗೇಂದ್ರ ಹೇಳಿದ್ದಂತೆ. ಈತನಿಗೆ ದ್ರುವ್ ಸರ್ಜಾ ಮ್ಯಾನೇಜರ್ ಅಶ್ವಿನ್ ಸಾಥ್ ನೀಡಿದ್ದ ಎನ್ನಲಾಗುತ್ತಿದೆ. ಪ್ರಶಾಂತ್ ಪೂಜಾರಿ ನಟ ದ್ರುವ್ ಸರ್ಜಾಗೆ ಜಿಮ್ ಟ್ರೇನ್ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರ ನಡುವೆ ಆಪ್ತತೆ ಮೂಡಿದೆ. ಇದರಿಂದ ಅಸಮಾಧಾನಗೊಂಡಿದ್ದ ಮ್ಯಾನೇಜರ್ ಅಶ್ವಿನ್ ಹಾಗೂ ನಾಗೇಂದ್ರ ಪ್ಲಾನ್ ಮಾಡಿ ಹರ್ಷ ಹಾಗೂ ಸುಭಾಷ್ ಮೂಲಕ ಹಲ್ಲೆ ಮಾಡಿಸಿದ್ದಾರಂತೆ. ತನಿಖೆ ವೇಳೆ ಅಶ್ವಿನ್ ಹೆಸರು ಕೇಳಿ ಬಂದಿದೆ. ಹೀಗಾಗಿ ಆತನನ್ನು ಬಂಧಿಸಲಾಗಿದೆ. ದರ್ಶನ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಈಗ ನಟ ದ್ರುವ್ ಸರ್ಜಾ ಮ್ಯಾನೇಜರ್ ಗೆ ಸಂಬಂಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.