ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟ ದುನಿಯಾ ವಿಜಯ್ 2ನೇ ಮಗಳು ಮೋನಿಷಾ ಸಿನಿ(Film) ರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ವಿನಯ್ ರಾಜಕುಮಾರಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಸಿಟಿ ಲೈಟ್ಸ್ ಎನ್ನುವ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಟ ದುನಿಯಾ ವಿಜಯ್(Duniya Vijaya) ಸ್ವತಃ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈಗಾಗ್ಲೇ ಸಲಗ, ಭೀಮ ಎನ್ನುವ ಪಕ್ಕಾ ಮಾಸ್ ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ ಸಕ್ಸಸ್ ಕಂಡಿರುವ ವಿಜಿ ಈಗ ಮಗಳ ಸಿನಿಮಾಗೂ ನಿರ್ದೇಶನ ಮಾಡುತ್ತಿದ್ದಾರೆ.
ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇಂದು ಮುಹೂರ್ತ ನೆರವೇರಿತು. ಇದೇ ವೇಳೆ ಚಿತ್ರದ ಪೋಸ್ಟರ್(Poster) ಸಹ ಬಿಡುಗಡೆಯಾಗಿದೆ. ತಲೆಮೇಲೆ ದೇವರ ಮೂರ್ತಿ ಹೊತ್ತುಕೊಂಡಿರುವ ನಟ ವಿನಯ್ ರಾಜಕುಮಾರ್, ನಟಿ ಮೋನಿಷಾ ಕುತೂಹಲ ಮೂಡಿಸಿದೆ. ನಟನ ಕೈಯಲ್ಲಿ ಚಾಟಿ, ನಟಿ ಡಮರುಗ ಶೈಲಿಯ ವಾದ್ಯವಿದೆ. ದುರುಗ ಮುರುಗರು ಎನ್ನುವ ಬುಡಕಟ್ಟು ಸಮುದಾಯದವರು ಇದೇ ರೀತಿ ವೇಷಭೂಷಣಗಳನ್ನು ತೊಟ್ಟು ತಲೆ ಮೇಲೆ ದೇವರ ಮೂರ್ತಿ ಹೊತ್ತು ಸಂಚರಿಸುತ್ತಾರೆ. ಹೀಗಾಗಿ ಪೋಸ್ಟರ್ ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ಸಿನಿಮಾಗಳಿಗೆ ಮ್ಯೂಸಿಕ್ ನೀಡುತ್ತಿರುವ ಚರಣ್ ರಾಜ್ ಸಂಗೀತ ಇಲ್ಲಿಯೂ ಮುಂದುವರೆದಿದೆ. ಖಡಕ್ ಸಂಭಾಷಣೆಗಳನ್ನು ಬರೆಯುವ ಚಿತ್ರ ಸಾಹಿತಿ ಮಾಸ್ತಿ ಬರಹ ಮತ್ತೆ ಮೋಡಿ ಮಾಡಲು ಸಜ್ಜಾಗಿದೆ. ಹೀಗಾಗಿ ಸಹಜವಾಗಿಯೇ ಸಿಟಿ ಲೈಟ್ಸ್ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ.