ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡದ ಖ್ಯಾತ ಹಿರಿಯ ನಟ ದಿವಂಗತ ದಿನೇಶ್ ಅವರ ಪುತ್ರ ನಟ ಗರಿ ದಿನೇಶ್ ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. 45 ವರ್ಷದ ಗಿರಿ ದಿನೇಶ್ ಅವರು ಮನೆಯಲ್ಲಿ ಪೂಜೆ ಸಲ್ಲಿಸುವ ವೇಳೆ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ ದರ್ಶನ್ ಲೀಡ್ ರೋಲ್ ಮಾಡಿದ್ದ ನವಗ್ರಹ ಚಿತ್ರದಲ್ಲಿ ಕನ್ನಡದ ಖಳನಟರ ಮಕ್ಕಳು ಕಾಣಿಸಿಕೊಂಡಿದ್ದರು. ಅದರಲ್ಲಿ ಗಿರಿ ದಿನೇಶ್ ಶೆಟ್ಟಿ ಪಾತ್ರ ಮಾಡಿದ್ದರು. ಮುಂದೆ ಚಮಾಕ್ಸು ಚಿಂದಿ ಉಡಾಯಿಸು, ವಜ್ರ ಸೇರಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದರು. ಆದರೂ ಚಿತ್ರರಂಗದಿಂದ ದೂರು ಉಳಿದಿದ್ದರು. ಅವಿವಾಹಿತರಾಗಿದ್ದ ಗಿರಿ ದಿನೇಶ್ ಅಣ್ಣನ ಮನೆಯಲ್ಲಿದ್ದರು. ಸಂಜೆ ಪೂಜೆ ಮಾಡುವ ವೇಳೆ ಕುಸಿದು ಬಿದ್ದಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ. ಇತ್ತೀಚೆಗೆ ನವಗ್ರಹ ಸಿನಿಮಾ ರೀ ರಿಲೀಸ್ ಆದಾಗಲೂ ಅವರು ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಗಳಿಂದ ದೂರವೇ ಉಳಿದಿದ್ದರು.