ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಅಂಗಳದ ಯುವ ನಟ ಸಂತೋಷ್ ಬಾಲರಾಜ್(34) ಅವರು ಜಾಂಡೀಸ್ ನಿಂದಾಗಿ ಮಂಗಳವಾರ ನಿಧನರಾಗಿದ್ದಾರೆ. ನಗರದ ಕುಮಾರಸ್ವಾಮಿ ಲೇಔಟ್ ನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ಶಾಕ್ ಆಗಿದೆ. ಯುವ ನಟನನ್ನು ಕಳೆದುಕೊಂಡಿದ್ದರಿಂದ ಸಿನಿ ವಲಯದಲ್ಲಿ ಆತಂಕ ಮೂಡಿದೆ.
ಗಣಪ, ಕರಿಯ-2, ಕೆಂಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಣಪ, ಕರಿಯ-2 ಚಿತ್ರಗಳಲ್ಲಿ ಯಶಸ್ವಿಯಾಗುವ ಮೂಲಕ ಜನಪ್ರಿಯತೆ ತಂದುಕೊಟ್ಟಿದ್ದವು. ಆದರೆ, ಕಳೆದ ತಿಂಗಳು ಜಾಂಡೀಸ್ ಕಾಣಿಸಿಕೊಂಡಿದೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.