ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): 500 ರೂಪಾಯಿ ಮುಖಬೆಲೆಯ ನೋಟಿನ(Fake Note)ಮೇಲೆ ಹಿಂದಿ ನಟ ಅನುಪಮ್ ಖೇರ್ ಫೋಟೋ ಮುದ್ರಿಸಿ, ಅದನ್ನು ಚಿನ್ನದ ವ್ಯಾಪಾರಿಗೆ ಕೊಟ್ಟು ಮೋಸ ಮಾಡಲಾಗಿದೆ. ಅದು ಬರೋಬ್ಬರಿ 1.30 ಕೋಟಿ ರೂಪಾಯಿ ಮೌಲ್ಯದ ಹೆಸರಿನಲ್ಲಿ ವಂಚಿಸಲಾಗಿದೆ. ಗುಜರಾತ್ ನ ಅಹಮದಾಬಾದ್ ಮೂಲಕ ಚಿನ್ನದ(Gold) ವ್ಯಾಪಾರಿ ಮೆಹುಲ್ ಠಕ್ಕರ್ ಅವರಿಗೆ ವಂಚಕರು ಮೋಸ ಮಾಡಿದ್ದಾರೆ. ಇದೀಗ ಅವರ ವಿರುದ್ಧ ಅಹಮದಾಬಾದ್ ನ ನವರಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇಬ್ಬರು ವಂಚಕರು ಮೆಹುಲ್ ಠಕ್ಕರ್ ಹತ್ತಿರ 2,100 ಗ್ರಾಂ ಚಿನ್ನವನ್ನು 1.60 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಮುಂಗಡವಾಗಿ 1.30 ಕೋಟಿ ರೂಪಾಯಿಯನ್ನು ಠಕ್ಕರ್ ಬಳಿ ಕೆಲಸ ಮಾಡುತ್ತಿರುವ ಭರತ್ ಜೋಶಿ ಎಂಬುವರಿಗೆ ಕೊಟ್ಟಿದ್ದಾರೆ. ಉಳಿದಿದ್ದು 30 ಲಕ್ಷ ರೂಪಾಯಿ ನಂತರ ಕೊಡುವುದಾಗಿ ಒಪ್ಪಂದವಾಗಿದೆ. ಇವರು 500 ರೂಪಾಯಿಯ 26 ಬಂಡಲ್ ಗಳ ನೋಟು ಎಣಿಸಲು ಹೋದಾಗ ನಟ ಅನುಪಮ್(Anupam Kher) ಖೇರ್ ಅವರ ಫೋಟೋ ಪತ್ತೆಯಾಗಿದೆ. ಸಿಸಿಟಿವಿಗಳ ದೃಶ್ಯಗಳನ್ನು ಆಧರಿಸಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ವಂಚಕರನ್ನು ಗುರುತಿಸಲಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.