ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಾರ್ಚ್ 1ರಿಂದ 8ರ ತನಕ ನಡೆಯಲಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ(Bengaluru International Film Festival 2025) ರಾಯಭಾರಿಯಾಗಿ ನಟ ಕಿಶೋರ್ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟ ಕಿಶೋರ್ ನಟಿಸಿದ್ದಾರೆ. ಈ ಬಾರಿಯ ಚಲನಚಿತ್ರೋತ್ಸವದ ಬ್ರಾಂಡ್ ಅಂಬಾಸಡರ್ ಆಗಿ ಸರ್ಕಾರ ನೇಮಕ ಮಾಡಿದೆ.
ಈ ಬಾರಿಯ ಚಲನಚಿತ್ರೋತ್ಸವದಕ್ಕ ‘ಸರ್ವ ಜನಾಂಗದ ಶಾಂತಿಯ ತೋಟ’ ಅಡಿಬರಹದ ಅಡಿಯಲ್ಲಿ ನಡೆಯಲಿದೆ. ಕನ್ನಡ ಸೇರಿ 200 ಸಿನಿಮಾಗಳು 13 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣಲಿವೆ. ಸುಮಾರು 60 ದೇಶಗಳ ಚಿತ್ರಗಳು ಫಿಲ್ಮ್ ಫೆಸ್ಟಿವಲ್ ನಲ್ಲಿ ತೆರೆ ಕಾಣಲಿವೆ.