ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್: ಟಾಲಿವುಡ್ ನಟ ನಾಗಾರ್ಜುನ್(akkineni nagarjuna) ಅವರಿಗೆ ಸೇರಿದ ಐಷಾರಾಮಿ ಎನ್ ಕನ್ವೆನ್ಸನ್ ಸೆಂಟರ್ ಅನ್ನು ಹೈಡ್ರಾ(ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮಾನಿಟರಿಂಗ್ ಅಂಡ್ ಪ್ರೊಟೆಕ್ಷನ್) ಶನಿವಾರ ತೆರವುಗೊಳಿಸಿದೆ. ತಮ್ಮಡಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಆರೋಪವಿತ್ತು. ಹೀಗಾಗಿ ಮೂರುವರೆ ಎಕರೆ ಜಾಗದಲ್ಲಿ ನಿರ್ಮಾಣವಾಗಿದ್ದ ಕನ್ವೆನ್ಷನ್ ಸೆಂಟರ್ ನೆಲಸಮಗೊಳಿಸಲಾಗಿದೆ.
ಈ ಸಂಬಂಧ ಹೈಡ್ರಾ ಅಧಿಕಾರಿಗಳಿಗೆ ದೂರು ಬಂದಿತ್ತು. ಇಂದು ಭಾರೀ ಭದ್ರತೆಯೊಂದಿಗೆ ಬೃಹತ್ ಯಂತ್ರಗಳ ಮೂಲಕ ಕಟ್ಟಡ ತೆರವುಗೊಳಿಸುವ(Demolition) ಕೆಲಸ ನಡೆಯಿತು. ಇಲ್ಲಿ ಮಾಧ್ಯಮಗಳಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು. ಸೆಂಟರ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೆಲ್ಲ ಬಂದ್ ಮಾಡಲಾಗಿತ್ತು.