ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರೆಟ್ರೋ ಸ್ಟೈಲ್ ನಲ್ಲಿ ಡ್ರೆಸ್ ಹಾಕಿಕೊಂಡು ಲಾಂಗ್ ಹಿಡಿದು ರೀಲ್ಸ್ ಮಾಡಿದ ನಟರಾದ ರಜತ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಇಬ್ಬರನ್ನು ವಿಚಾರಣೆ ನಡೆಸಿದ ಪೊಲೀಸರು ವಾಪಸ್ ಕೇಳಿದ್ದಾರೆ. ಮುಂದಿನ ವಿಚಾರಣೆಗೆ ಕರೆದಾಗ ಬರೆಬೇಕೆಂದು ಸೂಚಿಸಿದ್ದಾರೆ. ಬಸವೇಶ್ವರನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವಾಗ ಮಾರಕಾಸ್ತ್ರಗಳನ್ನು ಬಳಸುವುದು ಅಪರಾಧ ಹಾಗೂ ಕಾನೂನು ಬಾಹಿರ. ಬಿಗ್ ಮಾಜಿ ಸ್ಪರ್ಧಿಗಳಾದ ಇವರಿಬ್ಬರು ಸಿನಿಮಾವೊಂದರ ಶೂಟಿಂಗ್ ವೇಳೆ ರೀಲ್ಸ್ ಮಾಡಿದ್ದರು. ಆಗ ಲಾಂಗ್ ಒಬ್ಬರಿಗೊಬ್ಬರು ಎಸೆದುಕೊಂಡು ಡೈಲಾಗ್ ಹೇಳಿದ್ದರು. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬಳಿಸಿದ್ದರು. ಹೀಗಾಗಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.