ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ತೆಲುಗಿನ ಹನುಮಾನ್ ಚಿತ್ರದಲ್ಲಿ ನಟಿಸುತ್ತಿರುವ ಹೊತ್ತಿನಲ್ಲಿಯೇ ಇದೀಗ ಮತ್ತೊಂದು ಅನ್ಯಭಾಷೆಯ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂದೀಪ್ ಸಿಂಗ್ ನಿರ್ದೇಶನದ ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ನಟಿಸುತ್ತಿದ್ದು, ಅದರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಸಂದೀಪ್ ಸಿಂಗ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಜನವರಿ 21, 2027ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದರಂತೆ ಬರೋಬ್ಬರಿ 2 ವರ್ಷ ಸಮಯವಿದೆ. ನಟ ರಣದೀಪ್ ಹೂಡ ನಿರ್ದೇಶಿಸಿ ನಟಿಸಿದ್ದ ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾ ನಿರ್ಮಾಪಕರಲ್ಲಿ ಸಂದೀಪ್ ಸಿಂಗ್ ಸಹ ಒಬ್ಬರು. ಶಿವಾಜಿ ಪತ್ನಿಯ ಪಾತ್ರದಲ್ಲಿ ನಟಿ ಝಾನೈ ಭೋಂಸ್ಲೆ ನಟಿಸಲಿದ್ದಾರೆ. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿ 6 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.