ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ನಟ ಶಿವರಾಜಕುಮಾರ್ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಇದರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಡಿಸೆಂಬರ್ 24ರಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ಅಭಿಮಾನಿಗಳು, ಹಿತೈಷಿಗಳು, ಬಂಧು ಮಿತ್ರರು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧ ಕಡೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ಆಪರೇಷನ್ ಯಶಸ್ವಿಯಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಡಿಸೆಂಬರ್ 18ರಂದು ಪತ್ನಿ ಗೀತಾರೊಂದಿಗೆ ಅಮೆರಿಕಕ್ಕೆ ಹೋಗಿದ್ದಾರೆ. ಈ ವೇಳೆ ಚಿತ್ರರಂಗದ ಅನೇಕರು ಅವರನ್ನು ಭೇಟಿಯಾಗಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. 60 ವರ್ಷ ದಾಟಿದರೂ ಯುವ ನಟರೆ ನಾಚಿವಂತಹ ಫಿಟ್ನೆಸ್ ಹೊಂದಿರುವ ಶಿವಣ್ಣನ ಜೀವನಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ. ಹೀಗಿದ್ದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಒಂದಿಷ್ಟು ಆತಂಕ ಮೂಡುತ್ತೆ. ಇಂದು ನಡೆಯುವ ಸರ್ಜರಿ ಯಶಸ್ವಿಯಾಗಲಿ ಎನ್ನುವುದು ಎಲ್ಲರ ಹಾರೈಕೆ.