ಪ್ರಜಾಸ್ತ್ರ ಸುದ್ದಿ
ನಟ, ನಿರ್ದೇಶಕ ಉಪೇಂದ್ರ ಹಾಗೂ ಪತ್ನಿ, ನಟಿ ಪ್ರಿಯಾಂಕ್ ಅವರ ಮೊಬೈಲ್ ಹ್ಯಾಕ್ ಮಾಡಲಾಗಿದೆ. ಸೈಬರ್ ಕಿರಾತಕರು ಮೊಬೈಲ್ ನಂಬರ್ ಹ್ಯಾಕ್ ಮಾಡಿದ್ದು, ಈ ಸಂಬಂಧ ನಟ ಉಪೇಂದ್ರ ವಿಡಿಯೋ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ದಯವಿಟ್ಟು ಎಲ್ಲರಿಗೂ ಎಚ್ಚರಿಕೆಯ ಸಂದೇಶ ನೀಡುತ್ತಿದ್ದೇವೆ. ಪ್ರಿಯಾಂಕ್ ಅವರಿಗೆ ಒಂದು ನಂಬರ್ ನಿಂದ ಕರೆ ಬಂದಿದೆ. ಯಾರೋ ಒಬ್ಬ ಹ್ಯಾಕರ್ ಹ್ಯಾಶ್ ಟ್ಯಾಗ್ ಮಾಡಿ ಅಂತೆಲ್ಲ ಹೇಳಿ ಕರೆ ಮಾಡಿದ್ದ. ಆದರೆ, ಗೊತ್ತಿಲ್ಲದೆ ನನ್ನ ಮೊಬೈಲ್ ನಿಂದ ಕರೆ ಮಾಡಿದೀನಿ. ಹೀಗಾಗಿ ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಹೀಗಾಗಿ ಪ್ರಿಯಾಂಕಾ ಹಾಗೂ ನನ್ನ ನಂಬರ್ ನಿಂದ ಯಾರಾದರೂ ದುಡ್ಡು ಕಳಿಸಿ ಎಂದು ಸಂದೇಶ ಬಂದರೆ ದಯವಿಟ್ಟು ಕಳುಹಿಸೋದಕ್ಕೆ ಹೋಗಬೇಡಿ. ನಾವು ಈಗಾಗ್ಲೇ ಪೊಲೀಸರಿಗೆ ದೂರು ಕೊಡಲು ಹೋಗುತ್ತಿದ್ದೇವೆ ಎಂದಿದ್ದಾರೆ.