ಪ್ರಜಾಸ್ತ್ರ ಸುದ್ದಿ
ಟಾಲಿವುಡ್ ನಟ ಹಾಗೂ ರಾಜಕಾರಣಿ ವಿಜಯ್ ಹಾಗೂ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ನಡುವೆ ಡೇಟಿಂಗ್ ನಡೆಯುತ್ತಿದೆ ಎನ್ನುವ ವದಂತಿ ಹಬ್ಬಿದೆ. ಡಿಸೆಂಬರ್ 12ರಂದು ಗೋವಾದಲ್ಲಿ ನಟಿ ಕೀರ್ತಿ ಸುರೇಶ್, ಆಂಥೋನಿ ಥೊಟ್ಟಿಲ್ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಇವರಿಬ್ಬರು ಒಟ್ಟಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎನ್ನುವ ಫೋಟೋಗಳು ವೈರಲ್ ಆಗಿವೆ. ಕಳೆದ ಕೆಲವು ವರ್ಷಗಳಿಂದ ವಿಜಯ್ ಹಾಗೂ ತ್ರಿಷಾ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವ ಗಾಸಿಪ್ ಇದೆ.
https://twitter.com/TrollywoodX/status/1867249542149926983
ಇನ್ನು ವಿಜಯ್ ರಾಜಕೀಯ ಕಾರಣಕ್ಕೆ ಸಿನಿಮಾ ಬದುಕಿನಿಂದ ಹಿಂದೆ ಸರಿಯುತ್ತಿದ್ದು ದಳಪತಿ-69 ಅವರ ಕೊನೆಯ ಸಿನಿಮಾ. ಇದರಲ್ಲಿ ನಟಿ ತ್ರಿಷಾ ಜೊತೆಯಾಗಿದ್ದಾರೆ. ಮತ್ತೊಂದು ಕಡೆ ನಟಿ ತ್ರಿಷಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊಸಪ್ ವಿಜಯ್ ಚಂದ್ರಶೇಖರ್ ತಳಪತಿ ವಿಜಯ್ ಎಂದೇ ಪ್ರಸಿದ್ಧರು. 1999ರಲ್ಲಿ ಸಂಗೀತಾ ಸೋಮಲಿಂಗಮ್ ಎನ್ನುವರೊಂದಿಗೆ ಮದುವೆಯಾಗಿದೆ. ಒಂದು ಗಂಡು, ಒಂದು ಹೆಣ್ಣು ಮಗಳಿದ್ದಾಳೆ. 50 ವರ್ಷದ ನಟ ವಿಜಯ್ ಹಾಗೂ 41 ವರ್ಷದ ತ್ರಿಷಾ ಕೃಷನ್ ನಡುವೆ ಡೇಟಿಂಗ್ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ. ನಟಿ ತ್ರಿಷಾ ಉದ್ಯಮಿಯೊಬ್ಬರೊಂದಿಗೆ ನಿಶ್ಚಿತಾರ್ಥವಾಗಿತ್ತು. ಅದು ಮದುವೆವರೆಗೂ ಬರದೆ ಮುರಿದು ಬಿದ್ದಿದೆ.